ಕೊಪ್ಪಳ: ಬಾಲಕನನ್ನು ಬಲಿ ಪಡೆದಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಸನಾಳ ಗ್ರಾಮದ ಹೊರವಲಯದಲ್ಲಿರುವ ಅನಧಿಕೃತ ಗ್ರಾನೈಟ್ ಕ್ವಾರಿ ಹೊಂದಿರುವ ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ದಿಲೀಪ್ ಕುಮಾರ ಹಾಗೂ ಕಿರಿಯ ಅಭಿಯಂತರ ನವೀನ್ ಕುಮಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಹಿಂದೆ ಜರುಗಿದ ಅನಧಿಕೃತ ಗ್ರಾನೈಟ್ ಕ್ವಾರಿಗಳಿಗೆ ಕಾರಣರಾಗಿರುವ 8 ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇಳಕಲ್ ಪಟ್ಟಣದ ಹನುಮಂತಮ್ಮ ಪೆÇಲೀಸ್ ಪಾಟೀಲ, ಚಿನ್ನಮ್ಮ ದುರುಗೇಶ ಸುರಪುರ ಕಲಾಲಬಂಡಿ ಗ್ರಾಮದ ಪರಮೇಶ್ವರಪ್ಪ ಚನ್ನಪ್ಪ ಕೊಟಗಿ ಹಾಗೂ ಬಿಸನಾಳ ಗ್ರಾಮದ ಲಕ್ಷ್ಮಣ ಬಸಪ್ಪ ವಡ್ಡರ, ಮುತ್ತಪ್ಪ ಬಸಪ್ಪ ವಡ್ಡರ, ರಾಮಪ್ಪ ಬಸಪ್ಪ ವಡ್ಡರ, ಹನುಮಪ್ಪ ಮರಿಯಪ್ಪ ಚಿಕ್ಕಗಡ ಹಾಗೂ ದುರ್ಗವ್ವ ಯಮನಪ್ಪ ಚಿಕ್ಕಗಡ ಎಂಬ ಎಂಟು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಸರಕಾರದ ಅಧಿಸೂಚನೆ ಸಂಖ್ಯೆ ಎಂ.ಎಂ.ಎನ್ (2) 2014, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ಮತ್ತು ಮೈನ್ಸ್ & ಮಿನರಲ್ಸ್ ಆಕ್ಟ್ 1957 ಅಡಿ 31 ಪುಟಗಳ ದಾಖಲೆಗಳು ಜೊತೆಗೆ ಅನಧಿಕೃತ ಗಣಿಗಾರಿಕೆಯ ಛಾಯಾಚಿತ್ರಗಳ ಹಾಗೂ ವಿಡಿಯೋ ಸಾಕ್ಷಿ ಸಮೇತ ಕುಷ್ಟಗಿ ಜೆಎಂಎಫ್ಸಿ. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂವಿಜ್ಞಾನಿ ದಿಲೀಪ್ ಕುಮಾರ ಬಿ.ಜಿ ಅವರು ಪ್ರಕರಣ ದಾಖಲಿಸಿದ್ದಾರೆ.
ಅಧಿಕಾರಿಗಳ ತಂಡದಲ್ಲಿ ಹನುಮಸಾಗರ ಕಂದಾಯ ನಿರೀಕ್ಷಕ, ಹಿರೇಬನ್ನಿಗೋಳ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇನ್ನಿತರ ಸಿಬ್ಬಂದಿ ಭಾಗಿಯಾಗಿದ್ದರು. ಬಿಸನಾಳ ಗ್ರಾಮದ ಮಂಜುನಾಥ ಶರಣಪ್ಪ ಒದೆಗೋಳ ಎಂಬ 7 ವರ್ಷದ ಬಾಲಕ ನೀರಿನಿಂದ ತುಂಬಿದ ಗ್ರಾನೈಟ್ ಕ್ವಾರಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಬಾಲಕನ ಸಾವಿಗೆ ಅಕ್ರಮ ಗ್ರಾನೈಟ್ ಗಣಿಗಾರಿಕೆಗೆ ಅವಕಾಶ ನೀಡಿದ ಗಣಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel