ಚೀನಾ : ಕೆಲವೊಮ್ಮೆ ಆನ್ ಲೈನ್ ಡೆಲಿವರಿಯಲ್ಲಿ ಏನೇನೋ ಎಡವಟ್ಟುಗಳು ಆಗಿವೆ. ಇನ್ನೂ ಕೆಲವೊಮ್ಮೆ ಫ್ರಾಡ್ ಕೇಸ್ ಗಳು ಕಂಡು ಬಂದಿವೆ.. ಚೀನಾದ ಬಾಲಕ ಮನೆಯಲ್ಲಿ ಸಾಕುವುದಕ್ಕಾಗಿ ಆನ್ ಲೈನ್ ಮೂಲಕ ಮೀನು ಖರೀದಿ ಮಾಡಿದ್ದಾನೆ. ಡಿಲೆವರಿ ಆದ ನಂತರ ತನಗೆ ಬಂದಿದ್ದ ಪಾರ್ಸಲ್ ತೆಗೆದು ನೋಡಿದವ ಶಾಕ್ ಆಗಿದ್ದಾನೆ.. ಹೌದು ಆ ಪಾರ್ಸಲ್ ನಲ್ಲಿ ಮೀನು ಇರಲಿಲ್ಲ. ಬದಲಾಗಿ ಮೊಸಳೆ ಇದದಿದ್ದು ಕಂಡು ಬಾಲಕ ಗಾಬರಿಗೊಂಡಿದ್ದಾನೆ.
ಇನ್ನೂ ಅಚ್ಚರಿ ಅಂದ್ರೆ ಈತನಿಗೆ ಬಂದ ಪಾರ್ಸಲ್ ನಲ್ಲಿದ್ದ ಮೊಸಳೆ ಸಿಯಾಮಿಸ್ ಎನ್ನುವ ತಳಿಯ ಮೊಸಳೆಯಾಗಿದ್ದು, ಸದ್ಯಕ್ಕೆ ಈ ಪ್ರಜಾತಿಯು ಅಳಿವಿನಂಚಿನಲ್ಲಿದೆ. ಬಾಲಕ ಪಾರ್ಸಲ್ ನೋಡಿ ಗಾಬರಿಗೊಂಡು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಬಳಿಕ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೊಸಳೆ ವಶಕ್ಕೆ ಪಡೆದು ಆನ್ ಲೈನ್ ಕಂಪನಿಯ ವಿಚಾರಣೆ ನಡೆಸಿದ್ಧಾರೆ. ಆದ್ರೆ ಕಂಪನಿಯು ಈ ಆರೋಪವನ್ನ ನಿರಾಕರಿಸಿದ್ದು, ವಿಚಾರಣೆ ಜಾರಿಯಲ್ಲಿದೆ.