ಪೋಷಕರು ಬೈದ್ರು ಅಂತ ಮನೆಯಿಂದ ದುಡ್ಡು ಕದ್ದು ಗೋವಾಗೆ ಎಸ್ಕೇಪ್ ಆದ ಬಾಲಕ..!
ಓದಿನ ಕಡೆ ಗಮನ ಹರಿಸುತ್ತಿಲ್ಲ ಚೆನ್ನಾಗಿ ವಿದ್ಯಾಭ್ಯಾಸ ಮಾಡ್ತಿಲ್ಲ ಅಂತ ಪೋಷಕರು ಬೈತಿದ್ದಾರೆ ಅನ್ನೋ ಕಾರಣಕ್ಕೆ ಬೇಸತ್ತು 14 ವರ್ಷದ ಬಾಲಕನೋರ್ವ ಮನೆಯಿಂದ 1.5 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ. ಬಳಿಕ ಗೋವಾಗೆ ಎಸ್ಕೇಪ್ ಆಗಿ ಕ್ಲಬ್ ಗಳಲ್ಲಿ ಮೋಜು ಮಸ್ತಿ ಮಾಡಿದ್ದಾನೆ. ಸದ್ಯ ಆತನನ್ನ ಗೋವಾದಲ್ಲಿ ಪೊಲೀಸರು ಪತ್ತೆ ಹಚ್ಚಿ ವಾಪಸ್ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
ಬೈಡನ್ ಡಿಜಿಟಲ್ ಟೀಂನಲ್ಲಿ ಕಾಶ್ಮೀರಿ ಮಹಿಳೆ
ಹೌದು ವಡೋದರ ಮೂಲದ ಈ ಬಾಲಕ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಪೋಷಕರು ಗದರಿದ್ದರು. ಇಷ್ಟಕ್ಕೇ ದುಡ್ಡಿನ ಜೊತೆಗೆ ಮನೆಯಿಂದ ಎಸ್ಕೇಪ್ ಆದ ಬಾಲಕ ಅಮಿತ್ ನಗರ ಸರ್ಕಲ್ ಗೆ ತೆರಳಿ, ಅಲ್ಲಿಂದ ಪುಣೆಗೆ ಪ್ರಯಾಣ ಬೆಳೆಸಿದ್ದಾನೆ. ಬಳಿಕ ಗೋವಾಗೆ ತೆರಳಿದ್ದಾನೆ. ಬಳಿಕ ಪೋಷಕರು ಮಗನ ನಾಪತ್ತೆ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಶುರು ಮಾಡಿದ ಪೊಲೀಸರು ಗೋವಾದಲ್ಲಿ ಆತನನ್ನ ಪತ್ತೆ ಹಚ್ಚಿ ಕರೆತಂದಿದ್ದಾರೆ.
ಜಿಂಗ್ ಜಿಂಗ್ ಅಮೇಜಿಂಗ್… ಎಮ್ಮೆಗಳಿಗೂ ಬಂತು ಬ್ಯೂಟಿ ಪಾರ್ಲರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel