ಫ್ರಿಡ್ಜ್ , ಟಿವಿ ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲ್ಲಾ..!
ಇತ್ತೀಚೆಗೆ ಫ್ರಿಡ್ಜ್ , ಟಿವಿ ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಸುಳಿವು ನೀಡಿದ್ದ ಸರ್ಕಾರದ ನಡೆ ವಿರುದ್ಧ ವಿಪಕ್ಷಗಳು ಹಾಗೂ ಮಧ್ಯಮ ವರ್ಗದ ಜಜನರು ತೀವ್ರ ಆಕ್ರೋಶ ಹೊರಹಾಕಿದ್ದರು. ಆದ್ರೆ ಇದಕ್ಕೆ ಈಗ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯು ಸ್ಪಷ್ಟನೆ ನೀಡಿದೆ. ಹೌದು ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವರೆಂಬ ಕಾರಣಕ್ಕೆ ಯಾವುದೇ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ.
ಅಲ್ಲದೇ ಬೈಕ್, ಟಿವಿ ಹಾಗೂ ಫ್ರಿಡ್ಜ್ ಹೊಂದಿರುವ ಕುಟುಂಬಗಳು ಪಡಿತರ ಚೀಟಿಗಳನ್ನು ಹೊಂದಲು ಸರ್ಕಾರ ನಿಗದಿ ಪಡಿಸಿರುವ ಮಾನದಂಡನೆಗಳಲ್ಲಿ ಅವಕಾಶವಿದೆ. ಹೀಗಾಗಿ ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಆಧಾರರಹಿತವಾಗಿದೆ. ಇಂಥ ಯಾವುದೇ ನಿರ್ದೇಶನ ಅಥವಾ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗಳಿಗೆ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
BPL ಕಾರ್ಡ್ ದಾರರಿಗೆ ಬಿಗ್ ಶಾಕ್ – ವಾರ್ಷಿಕ 1.20 ಲಕ್ಷ ರೂ. ಆದಾಯ ಹೊಂದಿರುವವರ ಕಾರ್ಡ್ ಕ್ಯಾನ್ಸಲ್..!
ಈ ಮೂಲಕ ಮಧ್ಯಮವರ್ಗದ ಜನರ ಆತಂಕವನ್ನು ದೂರ ಮಾಡಿದೆ. ಅಲ್ಲದೇ ರಾಜ್ಯದಲ್ಲಿ ಸರ್ಕಾರದ ಮಾನದಂಡನೆಗಳಿಗೆ ವಿರುದ್ಧವಾಗಿ ಕೆಲವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಅಂತಹ ಅನರ್ಹರನ್ನ ಗುರುತಿಸಿ ಕಾರ್ಡ್ ಕ್ಯಾನ್ಸಲ್ ಮಾಡೋದಾಗಿ ಸ್ಪಷ್ಟನೆ ನೀಡಿದೆ. ಮುಖ್ಯವಾಗಿ 3 ಹೆಕ್ಟೇರ್ ಗಿಂತಲೂ ಹೆಚ್ಚಿನ ಜಮೀನು ಹೊಂದಿದ್ದರೆ , ವಾರ್ಷಿಕವಾಗಿ 1.20 ಲಕ್ಷ ರೂಪಾಯಿ ಆದಾಯ ಬರುತ್ತಿದ್ರೆ ಅಂತಹ ಕುಟುಂಬಗಳ ಪ್ರಸ್ತುತ ಸ್ಥಿತಿಗತಿಗಳನ್ನ ಪರಿಶೀಲಿಸಿ ಕುಟುಂಬಗಳ ಅನರ್ಹತೆ ನಿರ್ಧರಿಸಿ ಅವರ ಬಿಪಿಎಲ್ ಕಾರ್ಡ್ ಅನ್ನ ೆಪಿಎಲ್ ಆಗಿ ಪರಿವರ್ತಿಸುವುದಾಗಿ ತಿಳಿಸಿದೆ.