ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಗುಚಿ 7 ಮಂದಿ ನಾಪತ್ತೆ…
ಗುರುವಾರ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 30 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ 7 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಹಿರಿಯ ಅಧಿಕಾರಿ ಸೇರಿದಂತೆ ಹಲವು ಶಾಲಾ ಮಕ್ಕಳಿದ್ದಾರೆ. ಧುಬ್ರಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ದೋಣಿಯಲ್ಲಿ ಸುಮಾರು 100 ಮಂದಿ ಪ್ರಯಾಣಿಕರಿದ್ದು, 10 ಬೈಕ್ ಗಳನ್ನ ಅದರಲ್ಲಿ ತುಂಬಿಸಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ನದಿಯಲ್ಲಿ ಮುಳುಗಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಇಒ ತಿಳಿಸಿದ್ದಾರೆ. ಶಾಲಾ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದರೂ ಇದುವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ. ಇದಕ್ಕಾಗಿ ಎಸ್‌ಡಿಆರ್‌ಎಫ್ 10 ಡೈವರ್‌ಗಳನ್ನು ನಿಯೋಜಿಸಿದೆ. 8 ಮಂದಿ ಈಜಿ ಜೀವಉಳಿಸಿಕೊಂಡಿದ್ದಾರೆ.
ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ಬೋಟ್ ಪಲ್ಟಿ
ಧುಬ್ರಿ ಪಟ್ಟಣದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಅದಬರಿ ಎಂಬಲ್ಲಿ ಬ್ರಿಡ್ಜ್ ಪೋಸ್ಟ್‌ಗೆ ಡಿಕ್ಕಿ ಹೊಡೆದ ನಂತರ ದೋಣಿ ಮಗುಚಿ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧುಬ್ರಿ ವೃತ್ತದ ಅಧಿಕಾರಿ ಸಂಜು ದಾಸ್, ಭೂ ದಾಖಲೆ ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಯೊಂದಿಗೆ ಹಲವಾರು ಶಾಲಾ ಮಕ್ಕಳು ದೋಣಿಯಲ್ಲಿದ್ದರು. ಅಧಿಕಾರಿ ಸವೆತದಿಂದ ಹಾನಿಗೊಳಗಾದ ಪ್ರದೇಶವನ್ನು ಸಮೀಕ್ಷೆ ಮಾಡಲು ಹೋಗುತ್ತಿದ್ದರು ಎನ್ನಲಾಗಿದೆ. ದಾಸ್ ನಾಪತ್ತೆಯಾಗಿದ್ದು, ಇನ್ನಿಬ್ಬರು ಈಜಿ ಪರಾರಿಯಾಗಿದ್ದಾರೆ.
Brahmaputra: Assam Brahmaputra River Video Update; Seven Missing As Boat Capsizes | Dhubri News








