Brahmastra Movie : ಬ್ರಹ್ಮಾಸ್ತ್ರ ಸಿನಿಮಾಗೆ ಮೆಗಾಸ್ಟಾರ್ ಸಾಥ್..!!
ಬಾಲಿವುಡ್ ಸ್ಟಾರ್ ಕಪುಲ್ಸ್ ರಣಬಿರ್ ಕಪೂರ್, ಅಲಿಯಾ ಭಟ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಬ್ರಹ್ಮಾಸ್ತ್ರ.
ಈ ಸಿನಿಮಾ ತೆಲುಗಿನಲ್ಲಿ ಬ್ರಹ್ಮಾಸ್ತ್ರಂ ಟೈಟಲ್ ನಲ್ಲಿ ರಿಲೀಸ್ ಆಗಲಿದೆ.
ಇತ್ತೀಚೆಗೆ ಟೀಸರ್ ಜೊತೆಗೆ ನಟ ನಟಿಯರ ಲುಕ್ ಬಿಡುಗಡೆ ಮಾಡಿದ ಚಿತ್ರತಂಡ ಇದೀಗ ಒಂದು ಸ್ಪೆಷಲ್ ವಿಡಿಯೋವನ್ನು ರಿಲೀಸ್ ಮಾಡಿದೆ.
ಇದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಬ್ರಹ್ಮಾಸ್ತ್ರ ಸಿನಿಮಾ ಟೈಲರ್ ಗೆ ವಾಯ್ಸ್ ನೀಡಿದ್ದಾರೆ.

ಸದ್ಯ ರಿಲೀಸ್ ಆಗಿರುವ ವಿಡಿಯೋದಲ್ಲಿ ಹೀರೋ ಬಗ್ಗೆ ಪರಿಚಯ ಮಾಡಲಾಗುತ್ತಿದೆ.
ಈ ಸಿನಿಮಾದ ಟ್ರೈಲರ್ ಜೂನ್ 15 ರಂದು ರಿಲೀಸ್ ಆಗಲಿದೆ.
ಈ ಸಿನಿಮಾದಲ್ಲಿ ಪ್ರೊಫೆಸರ್ ಅರವಿಂದ್ ಚತುರ್ವೇದಿ ಪಾತ್ರವನ್ನು ಅಮಿತಾಬ್ ಬಚ್ಚನ್ ನಿರ್ವಹಿಸುತ್ತಿದ್ದಾರೆ.
ಅನಿಷ್ ಶೆಟ್ಟಿ ಪಾತ್ರದಲ್ಲಿ ನಾಗಾರ್ಜುನ್ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಹಿಂದಿ ಜೊತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸೆಪ್ಟಂಬರ್ 9 ರಂದು ರಿಲೀಸ್ ಆಗಲಿದೆ.








