ಕೇಸರಿಯಾ ಹಾಡಿನ ಆ ಒಂದು ಪದಕ್ಕಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ ಬ್ರಹ್ಮಾಸ್ತ್ರ
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬಹುನಿರಿಕ್ಷಿತ ಚಿತ್ರ ‘ಬ್ರಹ್ಮಾಸ್ತ್ರ ಭಾಗ 1: ಶಿವ’ ಚಿತ್ರದ ಬಹುನಿರೀಕ್ಷಿತ ಹಾಡು ಕೇಸರಿಯಾ ಬಿಡುಗಡೆಯಾಗಿದೆ. ಈ ಹಾಡು ಯೂಟ್ಯೂಬ್ ಉತ್ತಮ ವಿಕ್ಷಣೆಯನ್ನ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ಟ್ರೋಲ್ ಗೂ ಒಳಗಾಗುತ್ತಿದೆ. ಈ ಹಾಡಿನಲ್ಲಿ ಬರುವ ಲವ್ ಸ್ಟೋರಿಯಾ ಎನ್ನುವ ಪದದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಲವ್ ಸ್ಟೋರಿಯನ್ ಪದ ಹಾಡಿನ ಸಾಹಿತ್ಯಕ್ಕೆ ಸೂಟ್ ಆಗುವ ಕುರಿತು ವಿವಿಧ ರೀತಿಯ ಮಿಮ್ಸ್ ಗಳು ಹರಿದಾಡುತ್ತಿವೆ.
ಈ ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದು, ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ. ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ.
ಹಾಡಿನ ಸಾಹಿತ್ಯ ಟ್ರೋಲ್ ಆಗುತ್ತಿರುವುದರ ಕುರಿತು ರಣಬೀರ್ ಪ್ರತಿಕ್ರಿಯೇ ನಿಡಿದ್ದಾರೆ. ಮೀಮ್ಸ್ ಮತ್ತು ಟ್ರೋಲಿಂಗ್ ಜೀವನದ ಒಂದು ಭಾಗವಾಗಿದೆ. ಅವರು ಹಾಡಿನ ಪದವನ್ನ ಇಷ್ಟಪಟ್ಟಿದ್ದಾರೆ, “ಪ್ರೇಕ್ಷಕರು ಹಾಡನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ನನಗೆ ‘ಲವ್ ಸ್ಟೋರಿಯಾ’ ಬಿಟ್ ಇಷ್ಟವಾಯಿತು ಎಂದಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಅಯನ್ ಮುಖರ್ಜಿ ಅವರ ನೇತೃತ್ವದಲ್ಲಿ, ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಾಣ ಸಾರಥ್ಯದಲ್ಲಿ ಸೆಪ್ಟೆಂಬರ್ 9 ರಂದು 5 ಭಾರತೀಯ ಭಾಷೆಗಳಲ್ಲಿ – ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.








