ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ನೆಟ್ಟಿಗರು ಹೇಳಿದ್ದೇನು ?
ಬಾಲಿವುಡ್ ನ ಅತ್ಯಂತ ಪ್ರತಿಷ್ಠೆಯಾಗಿ ನಿರ್ಮಾಣಗೊಂಡ ಪಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರ.
ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್, ನಾರಾರ್ಜುನ್, ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸ್ಟಾರ್ ಸ್ಟೂಡಿಯಾಸ್, ಧರ್ಮ ಪ್ರೋಡಕ್ಷನ್, ಪ್ರೈಮ್ ಫೋಕಸ್, ಸ್ಟಾರ್ ಲೈಟ್ ಪಿಚ್ಚರ್ಸ್ ನಿರ್ಮಿಸಿದ ಈ ಸಿನಿಮಾವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ದಕ್ಷಿಣದಲ್ಲಿ ಸಮರ್ಪಿಸಿದ್ದಾರೆ.
ಭಾರಿ ನಿರೀಕ್ಷೆಗಳೊಂದಿಗೆ ಇಂದು ಬ್ರಹ್ಮಾಸ್ತ್ರ ರಿಲೀಸ್ ಆಗಿದೆ. ಈಗಾಗಲೇ ರಿಲೀಸ್ ಆಗಿದ್ದ ಟೀಸರ್, ಟ್ರೈಲರ್, ಹಾಡುಗಳ ಮೂಲಕ ಭಾರಿ ರೆಸ್ಪಾನ್ಸ್ ಪಡೆದುಕೊಂಡಿತ್ತು.

ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸೋಶೀಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾ ಕ್ಲೈಮ್ಯಾಕ್ಸ್, ಪ್ರಿ ಕ್ಲೈಮ್ಯಾಕ್ಸ್ ಸೀನ್ಸ್ ಚೆನ್ನಾಗಿದೆ ಎಂದಿರುವ ನೆಟ್ಟಿಗರು, ಫಸ್ಟ್ ಆಫ್ ನಲ್ಲಿ ಕೊಂಚ ಶ್ರದ್ದೆ ವಹಿಸಬೇಕಾಗಿತ್ತು.
ರಣಬೀರ್, ಅಲಿಯಾ ಭಟ್ ನಡುವೆ ಕೆಮಿಸ್ಟ್ರಿ ಚೆನ್ನಾಗಿದೆ. ಆದ್ರೆ ಲವ್ ಸ್ಟೋರಿಗೆ ತಕ್ಕ ಡೈಲಾಗ್ಸ್ ಇಲ್ಲದೇ ಇರೋದು ಸಿನಿಮಾದ ಮೈನಸ್ ಅಂತಾ ಹೇಳಿದ್ದಾರೆ.








