ಮುಂಬಯಿ: ಬಸ್ ನ ಬ್ರೇಕ್ ಫೇಲ್ ಆದ ಪರಿಣಾಮ 6 ಜನ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿರುವ ಘಟನೆ ಇಲ್ಲಿಯ (Mumbai) ಕುರ್ಲಾದಲ್ಲಿ (Kurla) ನಡೆದಿದೆ.
ಮುಂಬಯಿ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್ನ ಬ್ರೇಕ್ ಫೇಲ್ ಆದ ಪರಿಣಾಮ ಅಪಘಾತ ಸಂಭವಿಸಿದೆ. ಈ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಎದುರಿಸಿದೆ. ಬ್ರೇಕ್ ಫೇಲ್ ಆದ ನಂತರ ಸುಮಾರು 30 ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ಪಾದಾಚಾರಿಗಳ ಮೇಲೆ ಕೂಡ ಹರಿದಿದೆ. ಆನಂತರ ಗೋಡೆಗೆ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ. ಪರಿಣಾಮ ಘಟನೆಯಲ್ಲಿ 6 ಜನ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.