(Shivamogga): ಚಿನ್ನದ ವ್ಯಾಪಾರಿ(Gold Smith)ಯೊಬ್ಬರು ಡೆತ್ ನೋಟ್ (Death Note) ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ (Suicide)ಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಕುಮಾರ ಕುರ್ಡೇಕರ್ (41) ಆತ್ಮಹತ್ಯೆಗೆ ಶರಣಾದ ವ್ಯಾಪಾರಿ. ನಗರದ ಸಿದ್ದಯ್ಯ ರಸ್ತೆಯ ಕಾಡುವೀರಪ್ಪ ಕಂಪೌಂಡ್ ನಿವಾಸಿಯಾಗಿದ್ದು, ಇಬ್ಬರು ವ್ಯಕ್ತಿಗಳು ಮಾನಸಿಕ ಕಿರುಕಳು ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇವರು ಕಳೆದ 18 ವರ್ಷಗಳಿಂದಲೂ ಚಿನ್ನ, ಬೆಳ್ಳಿ ವ್ಯಾಪಾರ ನಡೆಸುತ್ತಿದ್ದರು.
ಡೆತ್ ನೋಟ್ ನಲ್ಲಿ ಪ್ರಶಾಂತ್ ಮೋರೆ ಹಾಗೂ ಗಣೇಶ್ ಎಂಬವರು ಮಾನಸಿಕ ಕಿರುಕುಳ (Mental Harassment) ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯ ಬಾತ್ ರೂಮ್ ನಲ್ಲಿ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.








