ತರಕಾರಿಗಳನ್ನ ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು ಪೊಲೀಸರ ಬಲೆಗೆ…
ಕೇರಳ : ಲಂಚವಾಗಿ ಹಣದ ಜೊತೆಗೆ ತರಕಾರಿಗಳನ್ನೂ ಕೂಡ ಪಡೆಯುತ್ತಿದ್ದ ಅಧಿಕಾರಿಗಳು ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ.. ಕೇರಳದ ಮಲಯಾರ್ ಆರ್ ಟಿಒ ಚೆಕ್ ಪೋಸ್ಟ್ ನಲ್ಲಿ ಘಟನೆ ನಡೆದಿದೆ.. ಈ ಅಧಿಕಾರಿಗಳು ಲಾರಿಗಳ ಮೂಲಕ ಬರುತ್ತಿದ್ದ ಕಿತ್ಳೆ ಹಣ್ಣು ಸೇರಿದಂತೆ ತರಕಾರಿ ,ಹಣ್ಣುಗಳನ್ನ ಲಂಚದ ರೂಪದಲ್ಲಿ ಪಡೆಯುತ್ತಿದ್ದರು ಎನ್ನಲಾಗಿದೆ..
ಲಂಚವಾಗಿ ದೊರೆತ ತರಕಾರಿ ಮತ್ತು ಹಣ್ಣುಗಳನ್ನು ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಚಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ..
ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಡಿವೈಎಸ್‌ಪಿ ಮತ್ತು ತಂಡ ಶಬರಿಮಲೆಗೆ ತೆರಳುವಂತೆ ನಟಿಸಿ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಜೊತೆಗೆ 69,500 ರೂ. ನಗದು ವಶಪಡಿಸಿಕೊಡಿಸಿಕೊಂಡಿದ್ದಾರೆ..
ಕೇರಳದ ಪಲಕ್ಕಾಡ್ ಜಿಲ್ಲೆಯ ವಿಜಿಲೆನ್ಸ್ ಡಿವೈಎಸ್‌ಪಿ ಎಸ್.ಶಂಸುದ್ದೀನ್ ನೇತೃತ್ವದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.








