ಕೋವಿಡ್ ಕೇರ್ ಸೆಂಟರ್‌ನಲ್ಲಿ ಪಿಪಿಇ ಕಿಟ್ ಧರಿಸಿ ನಡೆದ ದೇಶದ ಮೊದಲ ಮದುವೆ bride PPE kit
ಜೈಪುರ, ಡಿಸೆಂಬರ್08: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಮದುವೆಗೆ ಸ್ವಲ್ಪ ಮೊದಲು ಕೊರೋನವೈರಸ್ ಧೃಡ ಪಟ್ಟ ವಧುವಿಗೆ ಪಿಪಿಇ ಕಿಟ್ ಧರಿಸಿ ವಿವಾಹ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತ ಅವಕಾಶ ನೀಡಿದೆ. bride PPE kit

ಮದುವೆ ಸಮಾರಂಭವನ್ನು ಪೂರ್ಣಗೊಳಿಸಲು ವಧು ಮಾತ್ರವಲ್ಲದೆ, ವರ, ಅವರ ಪೋಷಕರು ಮತ್ತು ಪುರೋಹಿತರು ಕೂಡ ಪಿಪಿಇ ಕಿಟ್‌ಗಳನ್ನು ಧರಿಸಿರುವುದು ಕಂಡುಬಂತು.
ಪಿಪಿಇ ಕಿಟ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ನಡೆದ ದೇಶದ ಮೊದಲ ಮದುವೆ ಇದಾಗಿದೆ.
ಹಿಂದೂ ಪದ್ಧತಿಗಳ ಪ್ರಕಾರ, ಮದುವೆಯ ಆಚರಣೆಗಳು ಪ್ರಾರಂಭವಾದ ನಂತರ, ಮದುವೆಯನ್ನು ನಿಲ್ಲಿಸುವಂತಿಲ್ಲದ ಕಾರಣ ವಧುವಿಗೆ ಕೊರೋನಾ ಸೋಂಕು ಧೃಡ ಪಟ್ಟಾಗ ಆಕೆಯ ಕುಟುಂಬವು ಆತಂಕಕ್ಕೆ ಒಳಗಾಯಿತು.
ಆಂಧ್ರದ ಎಲೂರಿನಲ್ಲಿ ನಿಗೂಢ ಕಾಯಿಲೆಗೆ ಓರ್ವ ವ್ಯಕ್ತಿ ಬಲಿ – ರಾಜ್ಯಕ್ಕೆ ಕೇಂದ್ರ ತಜ್ಞರ ತಂಡದ ತುರ್ತು ಭೇಟಿ
ಕುಟುಂಬದ ಕೋರಿಕೆಯ ಮೇರೆಗೆ ಆಡಳಿತಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಪಡೆದ ನಂತರ, ಬರಾನ್ ಜಿಲ್ಲಾಧಿಕಾರಿ ಎಸ್‌ಡಿಎಂ ಕೆಲ್ವಾರಾ, ಎಸ್‌ಎಚ್‌ಒ, ಬ್ಲಾಕ್ ಮುಖ್ಯ ವೈದ್ಯಾಧಿಕಾರಿ ಪಿಪಿಇ ಕಿಟ್‌ಗಳನ್ನು ಧರಿಸಿ ಮದುವೆ ವಿಧಿವಿಧಾನಗಳನ್ನು ಪೂರೈಸಲು ಅನುವು ಮಾಡಿಕೊಟ್ಟರು.
ಈ ರೀತಿಯಾಗಿ ಕೊರೋನವೈರಸ್ ಪ್ರೋಟೋಕಾಲ್ ಅಡಿಯಲ್ಲಿ ಕೋವಿಡ್ ಕೇರ್ ಸೆಂಟರ್ ನ ಆವರಣದಲ್ಲಿ ಅಂತಿಮವಾಗಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ವಿವಾಹ ನಡೆಯಿತು.
#WATCH Rajasthan: A couple gets married at Kelwara Covid Centre in Bara, Shahbad wearing PPE kits as bride's #COVID19 report came positive on the wedding day.
The marriage ceremony was conducted following the govt's Covid protocols. pic.twitter.com/6cSPrJzWjR
— ANI (@ANI) December 6, 2020
ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಬೇಕಾಗಿರುವುದರಿಂದ ಅವರು ಮದುವೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಕುಟುಂಬವು ವಿನಂತಿ ಮಾಡಿತು. ಕಟ್ಟುನಿಟ್ಟಾದ ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸಿ ಮದುವೆಯನ್ನು ನಡೆಸಲಾಯಿತು. ಪುರೋಹಿತರು ಸಹ ಪಿಪಿಇ ಕಿಟ್ ಅನ್ನು ಧರಿಸಿದ್ದರು ಎಂದು ಸಿಎಚ್ಎಂಒ ಬರಾನ್ ಡಾ.ಸಂಪತ್ ರಾಜ್ ಹೇಳಿದರು.

ಮದುವೆಯ ನಂತರ ವಧುವನ್ನು ತಾಯಿಯೊಂದಿಗೆ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರಿಸಲಾಯಿತು.
ವರನನ್ನು ಸಹ ಕ್ವಾರಂಟೈನ್ ಗೆ ಒಳಪಡಿಸಿದ್ದು, ಅವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ವಾಯುಮಾಲಿನ್ಯದಿಂದಾಗಿ ಕೆಮ್ಮು ಉಂಟಾಗಿದ್ದರೆ ಇಲ್ಲಿದೆ ಸುಲಭವಾದ ಮನೆಮದ್ದುhttps://t.co/wkmjNg9GhY
— Saaksha TV (@SaakshaTv) November 30, 2020
ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಪರ್ಸ್ ಇಡುತ್ತಿದ್ದೀರಾ ? ಹಾಗಿದ್ದರೆ ಈ ಮಾಹಿತಿಯನ್ನು ಓದಿhttps://t.co/jEDUT5gzD0
— Saaksha TV (@SaakshaTv) November 30, 2020








