Britain Breaking : ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಕೊನೆಗೂ ರಾಜೀನಾಮೆ..
ಒಂದು ವಾರದಿಂದ ಭಾರೀ ಒತ್ತಡ ಎದುರಿಸುತ್ತಿದ್ದ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ (Liz Truss) ಅವರು ಕೊನೆಗೂ ಗುರುವಾರ ರಾಜೀನಾಮೆ ಘೋಷಿಸಿದ್ದಾರೆ. ಲಿಜ್ ಟ್ರಸ್ ಅವರ ನೀತಿಗಳು ಹಣಕಾಸಿನ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧತೆ ಉಂಟುಮಾಡಿತ್ತು. ನಂತರ ಪಕ್ಷದಲ್ಲಿ ಬಂಡಾಯ ಉಂಟುಮಾಡಿತ್ತು.
ಆರು ವಾರಗಳ ಅಧಿಕಾರವಧಿಯ ನಂತರ ಲಿಜ್ ಟ್ರಸ್ (Liz Truss) ಅನಿವಾರ್ಯತೆಗೆ ತಲೆ ಬಾಗಿದ್ದಾರೆ. ಬ್ರಿಟಿಷ್ ಪ್ರಧಾನಿ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೆದುರು ಮಾತನಾಡಿ “ನಾನು ಅಧಿಕಾರಕ್ಕೆ ಬಂದ ಬಳಿಕ ಭರವಸೆಗಳನ್ನು ಈಡೇರಿಸಲು ನನಗೆ ಸಾಧ್ಯವಾಗಲಿಲ್ಲ. ವಿಷಾದಿಸುತ್ತೇನೆ. ಈ ಬಗ್ಗೆ ಕಿಂಗ್ ಚಾರ್ಲ್ಸ್ ಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ. ಪಕ್ಷ ಮತ್ತು ತನ್ನದೇ ಆದ ಪ್ರಕ್ಷುಬ್ಧತೆಯ ನಡುವೆಯೂ ಸಹ, ಲಿಜ್ ಕಳೆದ ವಾರ ಮೌನವಾಗಿದ್ದರು.
ರಾಜೀನಾಮೆ ಬಳಿಕ ವಿಶಿಷ್ಟ ದಾಖಲೆಯೊಂದು ಲಿಜ್ ಟ್ರಸ್ ಹೆಸರಿನಲ್ಲಿ ದಾಖಲಾಗಿದೆ. ಬ್ರಿಟನ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಗೆ ಪ್ರಧಾನಮಂತ್ರಿಯಾಗಿದ್ದಾರೆ. ಈ ದಾಖಲೆ 1827 ರಲ್ಲಿ 119 ದಿನಗಳ ಸೇವೆ ಸಲ್ಲಿಸಿದ ಜಾರ್ಜ್ ಕ್ಯಾನಿಂಗ್ ಅವರ ಹೆಸರಿನಲ್ಲಿತ್ತು ಆನಂತರ ನಿಧನರಾಗದದಿದ್ದರು.
Britain Breaking : British Prime Minister Liz Truss resigns after tumultuous six-week term