Rishi Sunak – ಕರ್ನಾಟಕದ ಅಳಿಯ ಬ್ರಿಟನ್ ಪ್ರಧಾನಿ!
ಸುಧಾಮೂರ್ತಿ ಅಳಿಯ ಬ್ರಿಟನ್ ನೂತನ ಪ್ರಧಾನಿ
ಭಾರತ ಮೂಲದ ರಿಷಿ ಸುನಾಕ್ ಬ್ರಿಟನ್ ಪ್ರಧಾನಿ
28 ರಂದು ಪ್ರಧಾನಿಯಾಗಿ ಸುನಾಕ್ ಪ್ರಮಾಣ ವಚನ
ರಿಷಿ ಸುನಾಕ್ ಪರವಾಗಿ 198 ಸಂಸದರ ಬೆಂಬಲ
ಲಂಡನ್ : ನಿರೀಕ್ಷೆಯಂತೆ ಭಾರತ ಮೂಲದ ರಿಷಿ ಸುನಾಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್ ಜಾನ್ಸನ್ ಭಾನುವಾರ ಘೋಷಣೆ ಮಾಡಿದ್ದರು.
ಹೀಗಾಗಿ ರಿಷಿ ಸುನಾಕ್ ಅವರು ಬ್ರಿಟನ್ ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು.
ಅಲ್ಲದೆ ಸುನಾಕ್ ಅವರ ಪ್ರತಿಸ್ಪರ್ಥೀ ಮೊರ್ಡಂಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರು ಒತ್ತಡ ಹೇರಿದ್ದರು.

ಮೊರ್ಡಂಟ್ ಅವರು 100 ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದು, ಸುನಾಕ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಕೇವಲ 45 ದಿನ ಆಡಳಿತ ನಡೆಸಿ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು.
ನಂತರ ಬ್ರಿಟನ್ ನಲ್ಲಿ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಇತ್ತ ಪ್ರಧಾನಿ ಸ್ಥಾನಕ್ಕೆ ಮತ್ತೆ ರಿಷಿ ಸುನಾಕ್ ಅವರು ಸ್ಪರ್ಧಿಸಿದ್ದು, ಇವರಿಗೆ ಪೆನ್ನಿ ಮೊರ್ಡಂಟ್ ಪೈಪೋಟಿ ನೀಡಿದ್ದರು.
ಅಂತಿಮವಾಗಿ ಮೊರ್ಡಂಟ್ 28 ಸಂಸದರ ಬೆಂಬಲ ಪಡೆದುಕೊಂಡಿದ್ದರೇ ಸುನಾಕ್ ಪರವಾಗಿ 198 ಸಂಸದರು ಬೆಂಬಲ ಸೂಚಿಸಿದರು.
ಇದರೊಂದಿಗೆ ಬ್ರಿಟನ್ ಗೆ ಭಾರತೀಯ ಮೂಲದವರೊಬ್ಬರು ಪ್ರಧಾನಿಯಾಗಿದ್ದು, ಇತಿಹಾಸ ಸೃಷ್ಟಿಯಾಗಿದೆ.







