ರಾಜ್ಯದಲ್ಲಿ ಮತ್ತೆ ನಾಲ್ಕು ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆ
ಬೆಂಗಳೂರು : ನಿನ್ನೆಯಷ್ಟೆ ರಾಜ್ಯದ ಮೂವರನ್ನು ಬ್ರಿಟನ್ ವೈರಸ್ ಪತ್ತೆಯಾಗಿದ್ದು, ಇದೀಗ ಆ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮತ್ತೆ ನಾಲ್ವರಿಗೆ ಬ್ರಿಟನ್ ರೂಪಾಂತರಿ ವೈರಸ್ ಪತ್ತೆಯಾಗಿದೆ.
ರಾಜ್ಯಕ್ಕೆ ಬ್ರಿಟನ್ ನಿಂದ ಬಂದಿದ್ದವರ ಪೈಕಿ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರಲ್ಲಿ ಬ್ರಿಟನ್ ರೂಪಾಂತರಿ ವೈರಸ್ ಇದಿಯಾ ಎಂಬುದರ ಬಗ್ಗೆ ನಿಮಾನ್ಸ್ ಪ್ರಯೋಗಾಯಲದಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಈಗ ನಾಲ್ಕು ಮಂದಿಗೆ ರೂಪಾಂತರಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.
ಈ ಬಗ್ಗೆ ಐಸಿಎಂಆರ್ ವರದಿ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ದೇಶದಲ್ಲಿ 107 ಬ್ರಿಟನ್ ನಿಂದ ಬಂದ ವಿದೇಶಿಗರಲ್ಲಿ 20 ಜನರಿಗೆ ರೂಪಾಂತರಿ ವೈರಸ್ ದೃಢಪಟ್ಟಿದೆ.
ದೆಹಲಿಯಲ್ಲಿ 8, ಕೊಲ್ಕೊತ್ತಾದಲ್ಲಿ 1, ಪುಣೆ 1, ಬೆಂಗಳೂರಿನಲ್ಲಿ 4, ಸಿಸಿಎಂಬಿ 2, ಐಜಿಐಬಿ 1 ಸೇರಿದಂತೆ ಒಟ್ಟು 20 ಜನರಿಗೆ ಸೋಂಕಿರುವುದು ದೃಢಪಟ್ಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









