ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಕರ್ನಾಟಕದ ಜನತೆ ತತ್ತರಿಸಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ರಾಜ್ಯಕ್ಕೆ ಬ್ರಿಟನ್ ರೂಪಾಂತರಿ ಕೊರೊನಾ ಮತ್ತೆ ಕಂಟಕವಾಗುವ ಸಾಧ್ಯತೆ ಇದೆ.
ಬ್ರಿಟನ್ನಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಉತ್ತರಹಳ್ಳಿಯ 6 ವರ್ಷದ ಮಗಳು, 34 ವರ್ಷದ ಮಹಿಳೆ ಹಾಗೂ ರಾಜಾಜಿನಗರದ 73 ವರ್ಷದ ಮಹಿಳೆಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎನ್ನಲಾಗಿದೆ.
ಇಂದು ಸಂಜೆ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಡಿಸೆಂಬರ್ 19ರಂದು ಬ್ರಿಟನ್ನಿಂದ ತಾಯಿ ಮಗಳು ಬಂದಿದ್ದರು. ಬೆಂಗಳೂರಿಗೆ ಬಂದ ನಂತರ ಉತ್ತರಹಳ್ಳಿಯಲ್ಲಿ ನೆಲೆಸಿದ್ದರು. ಬಂದ ಕೆಲ ದಿನಗಳಲ್ಲಿ ಶೀತ-ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿತ್ತು.
ಇದೇ ವೇಳೆ ಬ್ರಿಟನ್ನಿಂದ ಬಂದು ರಾಜಾಜಿನಗರದಲ್ಲಿ ನೆಲೆಸಿದ್ದ ಮಹಿಳೆಯ ತಾಯಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದೆ. ಬ್ರಿಟನ್ನಿಂದ ಬಂದ ಮಗಳ ಸಂಪರ್ಕದಿಂದ ತಾಯಿಗೆ ಬ್ರಿಟನ್ ಕೊರೊನಾ ಸೋಂಕು ಹರಡಿದೆ.
ರಾಜಾಜಿನಗರದ ವೃದ್ಧೆ ಹಾಗೂ ಉತ್ತರಹಳ್ಳಿಯ ಇಬ್ಬರನ್ನೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅವರ ಸ್ವ್ಯಾಬ್ ಮಾದರಿಯನ್ನು ತೆಗೆದು ಪುಣೆಯ ಲ್ಯಾಬೋರೇಟರಿಗೆ ಕಳಿಸಲಾಗಿತ್ತು. ಈಗ ಮೂವರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪುಣೆಯ ಲ್ಯಾಬೋರೇಟರಿ ನೀಡಿದ ವರದಿಯಲ್ಲಿ ಮೂವರು ಮಹಿಳೆಯರಿಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.
ರಾಜಧಾನಿ ಬೆಂಗಳೂರಿಗೆ ಬ್ರಿಟನ್ ಭೂತ ಡೇಂಜರ್..ಡೇಂಜರ್..!
ಹೊಸ ವರ್ಷಾಚರಣೆಗೆ ಎರಡೇ ದಿನಗಳು ಬಾಕಿ ಇರುವಾಗಲೇ ಬೆಂಗಳೂರಿನ ಮೂವರಿಗೆ ಬ್ರಿಟನ್ ಮ್ಯೂಟೆಡ್ ಕೊರೊನಾ ದೃಢಪಟ್ಟಿರುವುದು ಎಚ್ಚರಿಕೆಯ ಗಂಟೆ ಬಾರಿಸಿದೆ.
ಡಿಸೆಂಬರ್ 19ರಂದು ಬ್ರಿಟನ್ ಏರ್ವೇಸ್ ಮೂಲಕ ಬೆಂಗಳೂರಿಗೆ ಬಂದಿದ್ದ ತಾಯಿ-ಮಗಳು ವಿಮಾನ ಹತ್ತುವ ಮೊದಲು ಕರೊನಾ ಟೆಸ್ಟ್ ಮಾಡಿಸಿಕೊಳ್ಳದೇ ಬಂದಿದ್ದರಂತೆ. ಹೀಗಾಗಿ ಇವರು ಎಷ್ಟು ಜನರಿಗೆ ಬ್ರಿಟನ್ ಕೊರೊನಾ ಹರಡಿಸಿದ್ದಾರೋ ಎಂಬ ಆತಂಕ ಶುರುವಾಗಿದೆ.
ಹೊಸ ವರ್ಷಾಚರಣೆಗೆ ಹೋಟೆಲ್, ಬಾರ್, ರೆಸಾರ್ಟ್ಗಳಲ್ಲಿ ಭರ್ಜರಿ ಸಿದ್ದತೆ ಮಾಡಿಕೊಂಡಿರುವಾಗಲೇ ಬ್ರಿಟನ್ ಹೆಮ್ಮಾರಿ ಡೇಂಜರ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ಬ್ರಿಟನ್ನಿಂದ 200ಕ್ಕೂ ಹೆಚ್ಚು ಮಂದಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಸರ್ಕಾರ ಹಾಗೂ ಬಿಬಿಎಂಪಿ, ಪೊಲೀಸರು ಇವರ ಪತ್ತೆಗೆ ನಡೆಸುತ್ತಿರುವ ಯಾವ ಪ್ರಯತ್ನಗಳೂ ಸಫಲವಾಗಿಲ್ಲ. ಹೀಗಾಗಿ ನಾಪತ್ತೆಯಾಗಿರುವವರು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬ್ರಿಟನ್ ಕೊರೊನಾ ಹಬ್ಬಿಸುವವರಾಗಿದ್ದಾರಾ ಎಂದ ಆತಂಕ ಎದುರಾಗಿದೆ.
ಪುಣೆ-1, ಹೈದ್ರಾಬಾದ್ನ ಇಬ್ಬರಿಗೆ ಕೊರೊನಾ
ಬ್ರಿಟನ್ನಿಂದ ಭಾರತ್ಕೆ ಬಂದವರಲ್ಲಿ ಬೆಂಗಳೂರಿನ ಮೂವರು ಸೇರಿ 6 ಜನರಿಗೆ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ದೃಢಪಟ್ಟಿದೆ. ಹೈದರಾಬಾದ್ನ ಇಬ್ಬರು ಹಾಗೂ ಪುಣೆಯ ಒಬ್ಬರಿಗೆ ರೂಪಾಂತರಿ ಕೊರೊನಾ ಕನ್ಫರ್ಮ್ ಆಗಿದ್ದು, ಸಂಜೆ ಅಧಿಕೃತ ಘೋಷಣೆ ಆಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel