ರೂಪಾಂತರಿ ಕೊರೊನಾ ಹಾವಳಿ : ಪರಿಸ್ಥಿತಿ ತೀರ ಹದಗೆಡಲಿದೆ ಎಂದ ಮೇಯರ್..!
ಒಂದೆಡೆ ಕೊರೊನಾ ಆತಂಕ ಯುಕೆನಲ್ಲಿ ಹೆಚ್ಚಾಗಿದೆ. ಇದೀಗ ರೂಪಾಂತರಿ ಕೊರೊನಾ ಕಾಟವೂ ಶುರುವಾಗಿರೋದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿದೆ. ಇದೀಗ ಕೊರೊನಾ ಸೋಂಕಿನ ಪ್ರಕರಣಗಳಿಂದ ಲಂಡನ್ ನಲ್ಲಿನ ಆಸ್ಪತ್ರೆಗಳು ಅತಿ ಶೀಘ್ರವೇ ರ‍್ತಿಯಾಗಲಿವೆ. ಈ ಸಂಗತಿ ದೇಶದಲ್ಲಿ ಅತಿ ದೊಡ್ಡ ಘಟನೆಯಾಗಲಿದೆ ಎಂದು ಲಂಡನ್ ಮೇಯರ್ ಸಾದಿಖ್ ಖಾನ್ ಎಚ್ಚರಿಕೆ ನೀಡಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕೊರೊನಾ ಸೋಂಕು ಕಡಿಮೆಯಾಗದೇ ಹೋದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ತೀವ್ರ ಹದಗೆಡುತ್ತೆ. ಎರಡು ವಾರಗಳಲ್ಲೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಕೂಡ ಇಲ್ಲದಂಥ ಪರಿಸ್ಥಿತಿ ಉಂಟಾಗಲಿದೆ. ರ‍್ಕಾರ ಈ ಪರಿಸ್ಥಿತಿಯನ್ನು ಹತೋಟಿಗೆ ತರಲೇಬೇಕಿದೆ ಎಂದು ಕೇಳಿಕೊಂಡಿದ್ದಾರೆ.
ಬಿಗ್ ಬಾಸ್ : ದೊಡ್ಮನೆಗೆ ಸೆಲೆಬ್ರಿಟಿಗಳ ಜೊತೆ ಇಬ್ಬರು ಕಾಮನ್ ಮ್ಯಾನ್ ಗಳ ಎಂಟ್ರಿ ಪಕ್ಕಾ…!
ರೂಪಾಂತರ ಸೋಂಕು ಲಂಡನ್ ಅನ್ನು ಕಠಿಣ ಪರಿಸ್ಥಿತಿಗೆ ದೂಡಿದೆ. ಪ್ರಸ್ತುತ ಈ ಪರಿಸ್ಥಿತಿಯನ್ನು ಪ್ರಮುಖ ಘಟನೆ ಎಂದು ಬ್ರಿಟನ್ ರ‍್ಕಾರ ಪರಿಗಣಿಸಬೇಕಿದೆ. ಶೀಘ್ರವೇ ಕ್ರಮ ಕೈಗೊಳ್ಳದೇ ಇದ್ದರೆ, ಇನ್ನಷ್ಟು ಜನರು ಸಾವನ್ನಪ್ಪುವುದು ಖಚಿತ” ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಲಂಡನ್ ನಲ್ಲಿ ಲಂಡನ್ ನಲ್ಲಿ ಪ್ರತಿ 30 ಜನರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಲಂಡನ್ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಿಂದ ಕೊರೊನಾ ರೋಗಿಗಳ ಸಂಖ್ಯೆಯು ಶೇ. 27ರಷ್ಟು ಏರಿಕೆಯಾಗಿದ್ದು, ವೆಂಟಿಲೇಟರ್ ಅವಶ್ಯಕತೆಯಿರುವ ರೋಗಿಗಳ ಸಂಖ್ಯೆ ಶೇ. 42ರಷ್ಟು ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







