ಕೊರೊನಾ ಸಂಕಷ್ಟ : ಬ್ರಿಟನ್ ನಿಂದ ಭಾರತಕ್ಕೆ ಮತ್ತೆ 1 ಸಾವಿರ ವೆಂಟಿಲೇಟರ್ ಗಳ ಪೂರೈಕೆ
ನವದೆಹಲಿ: ಭಾರತದಲ್ಲಿ ಕೋವಿಡ್ 2ನೇ ಅಲಿಯ ಪರಿಸ್ಥಿತಿ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿದೆ. ಆಕ್ಸಿಜನ್ ಕೊರತೆ , ಬೆಡ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ಅನೇಕ ರಾಷ್ಟ್ರಗಳು ಸಹಾಯಾಸ್ತ ಚಾಚಿವೆ. ಇದೀಗ ಭಾರತಕ್ಕೆ ಇಸ್ರೇಲ್ ಹಾಗೂ ಬ್ರಿಟನ್ ರಾಷ್ಟ್ರಗಳು ವೈದ್ಯಕೀಯ ಉಪಕರಣಗಳನ್ನು ಪೂರೈಸುವುದಾಗಿ ಹೇಳಿವೆ.
ಭಾರತಕ್ಕೆ ಮತ್ತೆ 1 ಸಾವಿರ ವೆಂಟಿಲೇಟರ್ ಗಳನ್ನು ಪೂರೈಸುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ.ಈ ಹಿಂದೆ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕಗಳು ಸೇರಿದಂತೆ 600 ವೈದ್ಯಕೀಯ ಸಲಕರಣೆಗಳನ್ನು ಪೂರೈಸುವುದಾಗಿ ಬ್ರಿಟನ್ ಸರ್ಕಾರ ಒಪ್ಪಿಕೊಂಡಿತ್ತು. ಇನ್ನೂ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನವೂ ಸೇರಿ ಅಮೆರಿಕಾ, ಜರ್ಮನಿ, ಹಾಗೂ ಅನೆಕ ದೇಶಗಳು ಭಾರತಕ್ಕೆ ಭಾರತಕ್ಕೆ ಬೆಂಬಲವನ್ನು ನೀಡುತ್ತಿವೆ.