ಕ್ರಿಕೆಟ್ ಮ್ಯಾಚ್ ಮಧ್ಯೆ ಬ್ರೋಮ್ಯಾನ್ಸ್.. Bromans saaksha tv
ಕ್ರಿಕೆಟ್ ನಲ್ಲಿ ಎಂಟರ್ ಟೈನಮೆಂಟ್ ಅನ್ನೊದು ಕಾಮನ್, ಮ್ಯಾಚ್ ಎಷ್ಟು ರಸವತ್ತಾಗಿದ್ದರೂ ಬ್ಯಾಟರ್ ಹಿಟ್ಟಿಂಗ್.. ಬೌಲರ್ ವಿಕೆಟ್ ತೆಗೆಯುವುದು.. ಆಟಗಾರರ ಮಧ್ಯ ಗಲಾಟೆ.. ಇವೆಲ್ಲವೂ ಮೈದಾನದಲ್ಲಿ ನೆರೆದಿರುವ ಪ್ರೇಕ್ಷಕರಿಗೆ ಮಜಾ ಕೊಡುತ್ತವೆ. ಅದಕ್ಕೆ ಬಿಗ್ ಬ್ಯಾಷ್ ಲೀಗ್ ನಲ್ಲಿ ಹೊರತಾಗಿಲ್ಲ. ಪ್ರತಿ ಬಾರಿ ಬಿಗ್ ಬ್ಯಾಷ್ ಲೀಗ್ ನಡೆದಾಗಲೂ ಬ್ಯಾಟ್ಸ್ ಮೆನ್ ಗಳ ಅಬ್ಬರ.. ಬೌಲರ್ ಗಳ ಆರ್ಭಟ.. ಆಟಗಾರರ ಘರ್ಜನೆ ಇದ್ದೇ ಇರುತ್ತದೆ. ಆದ್ರೆ ಈ ಬಾರಿ ಆಸಕ್ತಿಕರ ಘಟನೆವೊಂದು ನಡೆದಿದೆ.
ಮೈದಾನದಲ್ಲಿ ಡೇನಿಯಲ್ ವೊರಾಲ್, ಪೀಟರ್ ಸಿಡಿಲ್ ಬ್ರೋಮಾನ್ಸ್ ಮಾಡಿದ್ದಾರೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು..! ಡಿಸೆಂಬರ್ 21 ರಂದು ಸಿಡ್ನಿ ಸಿಕ್ಸರ್ಸ್, ಅಡಿಲೈಡ್ ಸ್ಟ್ರೈಕರ್ಸ್ ಮಧ್ಯೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಪೀಟರ್ ಸಿಡಿಲ್, ವೊರಾಲ್ ಅವರಿಗೆ ಮುತ್ತಿಟ್ಟಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಡಿಲೇಡ್, ನಿಗದಿತ 20 ಓವರ್ ಗಳಲ್ಲಿ 147 ರನ್ ಗಳನ್ನ ಗಳಿಸಿತ್ತು. ಈ ಗುರಿಯನ್ನು ಕಾಪಾಡಿಕೊಳ್ಳಲು ಅಡಿಲೇಡ್ ಕ್ಯಾಪ್ಟನ್ ಪೀಟರ್ ಸಿಡಿಲ್, ಅನುಭವಿ ವೇಗಿ ಡೇನಿಯಲ್ ವೊರಾಲ್ ಅವರಿಗೆ ಮೊದಲ ಓವರ್ ಎಸೆಯಲು ಬಾಲ್ ಕೊಟ್ಟರು.
ಮೊದಲ ಎಸೆತದ ಬಳಿಕ ವೋರಾಲ್ ಹತ್ತಿರಕ್ಕೆ ಬಂದ ಸಿಡಿಲ್, ಸುದೀರ್ಘ ಚರ್ಚೆ ನಡೆಸಿದರು. ಹೀಗೆ ಮಾತನಾಡುತ್ತಾ ಸಿಡಿಲ್, ವೊರಾಲ್ ಅವರ ಕೆನ್ನೆಗೆ ಮುತ್ತಿಟ್ಟಿದ್ದು, ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
Lots of love at @StrikersBBL 😘 #BBL11 pic.twitter.com/3pZg8RjkRy
— 7Cricket (@7Cricket) December 21, 2021
ಇದರಿಂದ ಮೊದಲು ಶಾಕ್ ಆದ ವೋರಲ್, ನಂತರ ನಕ್ಕಿದ್ದಾರೆ. ಆದ್ರೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರಿಗೆ ಆಹಾರವಾಗಿದೆ. ನೆಟ್ಟಿಗರು ಈ ವಿಡಿಯೋಗೆ ನಾನಾ ರೀತಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
”ಆಟ ಮಧ್ಯದಲ್ಲಿ ಬ್ರೋಮಾನ್ಸ್ ಯಾಕೆ.. ಸಹಿಸಿಕೊಳ್ಳೊಕ್ಕೆ ಆಗುತ್ತಿಲ್ಲ ಅಂತಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ನು ಮ್ಯಾಚ್ ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ನಾಲ್ಕು ವಿಕೆಟ್ ಅಂತರದಲ್ಲಿ ಜಯ ಸಾಧಿಸಿದೆ.ಮೊದಲು ಬ್ಯಾಟಂಗ್ ಮಾಡಿದ ಅಡಿಲೇಡ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತ್ತು. ಆನಂತರ ಸಿಡ್ನಿ ಸಿಕ್ಸರ್ಸ್ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿಯನ್ನ ತಲುಪಿತು.