ಬೆಂಗಳೂರು: ಒಂದಿಷ್ಟು ಹಗ್ಗಜಗ್ಗಾಟ, ಮುಸುಕಿನ ಗುದ್ದಾಟ ನಂತರ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಿದ್ರು. ಇದರ ಬೆನ್ನಲ್ಲೆ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ನಿನ್ನೆ ಮೊನ್ನೆ ಬಂದವರಿಗೆ ಪಕ್ಷದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಕೆಲ ಬಿಜೆಪಿ ಶಾಸಕರು ಅಸಮಾಧಾನವಾಗಿದ್ದಾರೆ. ಈ ಮಧ್ಯೆ ಕೆಲವೇ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗಲಿದೆ ಅನ್ನೋ ಪಿಸುಪಿಸು ಮಾತುಗಳು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬಂದಿವೆ. ಸಂಪುಟ ವಿಸ್ತರಣೆಯ ವೇಳೆ ಮೂಲ ಬಿಜೆಪಿಗರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ, ಸದನದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ತಾವು-ತಾವೇ ಮಾತನಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಜುಲೈ ತಿಂಗಳಿನಲ್ಲಿ ಸಂಪುಟ ಪುನಾರಚನೆ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಬಿಜೆಪಿಯ ಕೆಲ ಶಾಸಕರು ಈಗಿನಿಂದಲೇ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ ಎನ್ನಲಾಗಿದೆ. ಯಾರೋ ಒಬ್ಬರನ್ನು ನಂಬುವ ಬದಲು, ಈ ಬಾರಿ ನೇರವಾಗಿ ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಬೇಕೆಂದು ಶಾಸಕರು ಲೆಕ್ಕಾಚಾರ ಹಾಕಿಕೊಂಡಿದ್ದಾರಂತೆ.
ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆದಿಯಾಗಿ ದೆಹಲಿ ಮಟ್ಟದಲ್ಲಿ ಹಿರಿತನ, ಜಾತಿಯಾಧಾರ ಹಾಗೂ ಪ್ರಾಂತ್ಯ ಆಧಾರದ ಮೇಲೆ ಲಾಬಿ ಮಾಡಲು ವೇದಿಕೆ ಸಿದ್ಧಪಡಿಸಿಕೊಳ್ಳುವುದರ ಬಗ್ಗೆಯೂ ಶಾಸಕರುಗಳು ಮಾತನಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ತಾಪಮಾನ ಕುಸಿತ; ಚಳಿಯೋ ಚಳಿ!!
ಭಾರೀ ಮಳೆಯಿಂದಾಗಿ ತತ್ತರಿಸಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯಾದ್ಯಂತ ತಾಪಮಾನ ಕುಸಿತವಾಗಿದ್ದು, ಬರುವ ಕೆಲವು ದಿನಗಳಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಹಲವು...