ಸಿದ್ದರಾಮಯ್ಯ ಅವರಿಗೆ ಬಿಎಸ್ ವೈ ಗಿಫ್ಟ್!
600 ಕೋಟಿ ರೂ.ಗಳ ಯೋಜನೆಗೆ ಬಿಎಸ್ ವೈ ಅನುಮೋದನೆ
ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಸಿಎಂ ಭರ್ಜರಿ ಗಿಫ್ಟ್
ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಸಿದ್ದರಾಮಯ್ಯ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಭರ್ಜರಿ ಗಿಫ್ಟ್ ನೀಡಿದ್ದಾರೆ. ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 600 ಕೋಟಿ ರೂ.ಗಳ ಯೋಜನೆಗೆ ಬಿಎಸ್ ವೈ ಅನುಮೋದನೆ ನೀಡಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಜೋರು ಗಲಾಟೆ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಸಿದ್ದರಾಮಯ್ಯ ಅವರು, ಒಂದು ಹಂತದಲ್ಲಿ ಅಧಿವೇಶನವನ್ನು ಬಹಿಷ್ಕರಿಸಿ ದೂರ ಉಳಿಯುವ ಬೆದರಿಕೆ ಹಾಕಿದ್ದರು. ಈ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ತೀವ್ರಗತಿಯಲ್ಲಿ ಸಂಧಾನ ಪ್ರಯತ್ನಗಳು ನಡೆದಿದ್ದವು. ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಎರಡು-ಮೂರು ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಧಾನ ಪ್ರಯತ್ನ ನಡೆಸಿದ್ದರು. ಈ ಮಧ್ಯೆ ಪ್ರವಾಸೋದ್ಯಮ, ಕೃಷಿ, ನೀರಾವರಿ ಇಲಾಖೆಗಳಿಗೆ ಸಂಬಂಧಪಟ್ಟಂತಹ 600 ಕೋಟಿ ರೂ. ಯೋಜನೆಗೆ ಯಡಿಯೂರಪ್ಪ ಅವರು ಸಹಿ ಹಾಕಿದ್ದಾರೆ.