ಬಿಎಸ್ ವೈ ಚದುರಂಗದಾಟಕ್ಕೆ ಹೈಕಮಾಂಡ್ ಸುಸ್ತು
ಬೆಂಗಳೂರು : ಒಂದೆಡೆ ನಾಯಕತ್ವ ಬದಲಾವಣೆಯ ಚರ್ಚೆ.. ಇನ್ನೊಂದೆಡೆ ಸಂಪುಟ ವಿಸ್ತರಣೆ ಸಂಕಟ..
ಈ ಎರಡ ಮಧ್ಯೆ ಸಿಲುಕಿ ನಲುಗಿ ಹೋಗುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಪಕ್ಷದ ಬಿಗ್ ಬಾಸ್ ಗಳಿಗೆ ಚೆಕ್ ಮೇಟ್ ಇಟ್ಟಿದ್ದಾರೆ.
ರಾಜಾಹುಲಿಯ ರಾಜಕೀಯ ರಣತಂತ್ರಕ್ಕೆ ದೆಹಲಿ ವರಿಷ್ಠರು ದಂಗ್ಗುಪಡಿದೋಗಿದ್ದಾರೆ.
ಹೌದು..! ಶತಾಯಗತಾಯ ಸಿಎಂ ಬದಲಾವಣೆ ಮಾಡಲೇಬೇಕೆಂದು ಪಣತೊಟ್ಟಿರುವ ಹೈ ಕಮಾಂಡ್ ಗೆ ಬಿಎಸ್ ವೈ ಒಬಿಸಿ ಪಂಚ್ ಕೊಟ್ಟಿದ್ದಾರೆ.
ನಿಗಮ ಮಂಡಳಿಗಳ ನೇಮಕಾತಿ ಮೂಲಕ ಹೈ ಕಮಾಂಡ್ ಗೆ ಸ್ಟ್ರಾಂಗ್ ಮೆಸೇಜ್ ಕಳುಹಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ-ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಶಿಫಾರಸು ಮಾಡಲು ಮುಂದಾಗುವ ಮೂಲಕ ಬಿಜೆಪಿ ವರಿಷ್ಠರಿಗೆ ದೊಡ್ಡ ಆಘಾತವನ್ನೇ ನೀಡಿದ್ದರು.
ಇದರ ಪರಿಣಾಮ ಅರಿತ ಅಮಿತ್ ಶಾ ಕೂಡಲೇ ಕರೆ ಮಾಡಿ ಒಬಿಸಿ ಅಜೆಂಡಾವನ್ನು ಕೈ ಬಿಟ್ಟು, ದೆಹಲಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ಒಬಿಸಿ ವಿಷಯವನ್ನು ಮುಂದೂಡಲಾಯಿತು.
ಹಾಗಾದರೆ ಒಬಿಸಿ ಅಸ್ತ್ರಕ್ಕೆ ಹೈ ಕಮಾಂಡ್ ಬೆದರಿದ್ದೇಕೆ..?
ನಾಯಕತ್ವದ ಬದಲಾವಣೆಗೆ ಮುಂದಾಗಿರುವ ಹೈಕಮಾಂಡ್ ಗೆ ಬಿಎಸ್ ವೈ ಪ್ಲಾನ್ ಹೊಸ ತಲೆನೋವು ಉಂಟು ಮಾಡಿದೆ. ಹಾಗಾದ್ರೆ ಹೈ ಕಮಾಂಡ್ ಗೆ ಎದುರಾದ ಆತಂಕವೇನು ಎಂಬೋದನ್ನ ನೋಡೊದಾದ್ರೆ.
ಒಂದು ವೇಳೆ ವೀರಶೈವ-ಲಿಂಗಾಯತರಿಗೆ ಒಬಿಸಿ ಮೀಸಲಾತಿ ನೀಡದ್ರೆ ಬಿಎಸ್ ವೈ ಪ್ರಬಲ ಸಮುದಾಯದ ಅನುಕಂಪ, ಬೆಂಬಲ, ವಿಶ್ವಾಸಗಳಿಸುವ ಸಾಧ್ಯತೆಗಳಿವೆ. ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ, ಬಿಎಸ್‍ವೈ ವಿಶ್ವಾಸದ ಪುನರುಚ್ಛಾರ; ಹೇಳಿಕೆಯಲ್ಲೇ ಗೊಂದಲ..!
ಹಾಗೇ ಇಡೀ ವೀರಶೈವ-ಲಿಂಗಾಯತ ಸಮುದಾಯವೇ ಯಡಿಯೂರಪ್ಪರ ಬೆನ್ನಿಗೆ ನಿಲ್ಲಲುಬಹುದು.
ಆಗ ನಾಯಕತ್ವ ಬದಲಾವಣೆ ಬಹುತೇಕ ಕಷ್ಟ ಸಾಧ್ಯ. ಅಲ್ಲದೆ ಒಂದು ವೇಳೆ ಯಡಿಯೂರಪ್ಪರನ್ನು ಬದಲಾಯಿಸಿದರೆ, ಇಡೀ ಸಮುದಾಯಕ್ಕೆ ಬಿಜೆಪಿ ವಿರುದ್ಧ ತಪ್ಪು ಸಂದೇಶ ರವಾನೆಯಾಗಲಿದೆ.
ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಏಟು ಬೀಳಲಿದೆ ಎಂಬ ಭೀತಿ ಹೈ ಕಮಾಂಡ್ ಗೆ ಎದುರಾಗಿತ್ತು. ಬೆಳಗಾವಿ ಜಿಲ್ಲೆ ವಿಭಜನೆ : ಸವದಿ ಹೇಳಿದ್ದೇನು.?
ಇದಲ್ಲದೆ ರಾಜ್ಯದಲ್ಲಿ ನಿರ್ಣಾಯಕರಾಗಿರುವ ವೀರಶೈವ-ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎಂಬ ವಾಸ್ತವಾಂಶ ಬಿಜೆಪಿ ವರಿಷ್ಠರಿಗೆ ಇತ್ತು.
ಈ ಎಲ್ಲ ಕಾರಣಗಳಿಂದಾಗಿ ಮುಂದೆ ಮಾಡಲು ಉದ್ದೇಶಿಸಿರುವ ಸುಗಮ ನಾಯಕತ್ವ ಬದಲಾವಣೆಗೆ ಎದುರಾಗುವ ವಿಘ್ನವನ್ನು ಅರಿತ ಹೈ ಕಮಾಂಡ್ ಕೂಡಲೇ ಬಿಎಸ್ ವೈ ಒಬಿಸಿ ಪ್ಲಾನ್ ಗೆ ಬ್ರೇಕ್ ಹಾಕಿದೆ.
ಅಲ್ಲದೆ ನಾಯಕತ್ವ ಬದಲಾವಣೆ ಉದ್ದೇಶವನ್ನು ಸದ್ಯಕ್ಕೆ ಕೈ ಬಿಟ್ಟಿದೆ. ಇನ್ನು ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಅತೀ ಶೀಘ್ರದಲ್ಲಿ ಸಿಎಂ ದೆಹಲಿಗೆ ತೆರಳಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










