`ಏಯ್ ಯಡಿಯೂರಪ್ಪ (bs yeddyurappa) ನಿಮ್ಮ ಸಿಡಿ ಬಿಟ್ಬಿಡ್ತೀನಿ’ ಅಂತಾ ಹೇಳಿದ್ಯಾಕೆ ಸಿದ್ದು..?
ಬೆಂಗಳೂರು : ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಕಾಮಪುರಾಣ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ.
ಈ ಪ್ರಕರಣವನ್ನ ಬಳಸಿಕೊಂಡಿ ವಿರೋಧ ಪಕ್ಷಗಳು ಆಡಳಿತರೂಢ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳನ್ನು ತುಸು ಗಟ್ಟಿಯಾಗಿ ಮಾಡುತ್ತಿದೆ.
ಈ ಮಧ್ಯೆ ಈ ಪ್ರಕರಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಜನಧ್ವನಿ ಜಾಥಾದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ನಿನ್ನೆ ಟಿವಿನಲ್ಲಿ ನೋಡಿದ್ರಾ ಒಬ್ಬ ಮಂತ್ರಿ. ನೋಡೋಕೆ ನಾಚಿಕೆ ಹೇಳೋಕೆ ಅಸಹ್ಯವಾಗುತ್ತೆ ಅಂತಾ ಟೀಕಿಸಿದರು.
ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮಾತಾಡಿ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾನೆ.
ಆದ್ರೆ ಅವನ ತಮ್ಮ ಹೇಳ್ತಾನಂತೆ ಏಯ್ ಯಡಿಯೂರಪ್ಪ ನನ್ನ ಅಣ್ಣನ ರಾಜೀನಾಮೆ ಪಡೆದರೆ ನಿಮ್ಮ ಸಿಡಿ ಬಿಡಬೇಕಾಗುತ್ತೆ ಅಂತಾನಂತೆ. ಇಂತಹ ಲಜ್ಜೆಗೆಟ್ಟವರೆಲ್ಲಾ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.