BSP President Mayavathi
ಉತ್ತರಪ್ರದೇಶ: ರಾಜ್ಯ ಸಭಾ ಚುನಾವಣೆಗೆ ಬಿಎಸ್ ಪಿ ಅಭ್ಯರ್ಥಿಯಾಗಿ ರಾಮ್ ಜಿ ಗೌತಮ್ ಆಯ್ಕೆಯನ್ನು ವಿರೋಧಿಸಿದ ಬಹುಜನ ಸಮಾಜವಾದಿ ಪಕ್ಷದ 7 ಬಂಡಾಯ ಶಾಸಕರನ್ನು ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಅಮಾನತುಗೊಳಿಸಿದ್ದಾರೆ. ಬಿಎಸ್ ಪಿ ಅಧ್ಯಕ್ಷೆ ಮಾಯಾವತಿಯವರು, ರಾಜ್ಯ ಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ರಾಮ್ ಜಿ ಗೌತಮ್ ಅವರನ್ನು ಆಯ್ಕೆ ಮಾಡಿದ್ದರು. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿಯೂ ಘೋಷಣೆ ಮಾಡಿದ್ದರು. ಆದ್ರೇ ಅವರ ಈ ನಿರ್ಧಾರವನ್ನ ಅನೇಕರು ವಿರೋಧಿಸಿದ್ದರು.
ಅಯ್ಯೋ.. ಮುನಿರತ್ನ ತಾಯಿಯನ್ನು ಮಾರಾಟ ಮಾಡಲಿಲ್ಲವೇ ? ಡಿಕೆಶಿ ಪ್ರಶ್ನೆ
ಪ್ರಮುಖವಾಗಿ ಶಾಸಕರಾದ ಹಕೀಂ ಲಾಲ್ ಬಿಂಡ್, ಚೌಧುರಿ ಅಸ್ಲಂ ಆಲಿ, ಮಹ್ಮದ್ ಮುಜ್ತಾಬ್ ಸಿದ್ದೀಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ ಗೋವಿಂದ್ ಭಾರ್ಗವ್ ಹಾಗೂ ಬಂದನಾ ಸಿಂಗ್ ಮಾಯಾವತಿ ಅವರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಈ ನಿರ್ಧಾರ ಖಂಡಿಸಿ ಬಂಡಾಯವೆದ್ದಿದ್ದರು. ಹೀಗಾಗಿ ಬಂಡಾಯವೆದ್ದ 7 ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರೆಡಿಸಿದ್ದಾರೆ ಪಕ್ಷದ ಮುಖ್ಯಸ್ಥೆ ಮಾಯಾವತಿ. ಇತ್ತ ಪಕ್ಷದಿಂದ ಅಮಾನತುಗೊಂಡ ಬಂಡಾಯ ಶಾಸಕರು ಸದ್ಯ ಸಮಾಜವಾದಿ ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವಿಚಾರ ಕೆಲ ಮೂಲಗಳಿಂದ ತಿಳಿದುಬಂದಿದೆ.
BSP President Mayavathi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel