ಬೆಂಗಳೂರು: ಬಿಜೆಪಿಯಲ್ಲಿ ನನಗೆ ಭವಿಷ್ಯ ಇಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನೇ ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ. ಹಾಗಾಗಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬರುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾಗಿ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಗಾದರೆ ಯೋಗೇಶ್ವರ್ ಬಾಂಬ್‍ಗೆ ಬೆಚ್ಚಿ ಬಿದ್ದವರು ಯಾರು..? ಸಿಎಂ ಯಡಿಯೂರಪ್ಪ ಅವರೋ..ಮತ್ಯಾರು.. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲ್ಲ, ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾಗಿ ಡಿ.ಕೆ ಶಿವಕುಮಾರ್ ಇಟ್ಟಿರುವ ಗುನ್ನಾ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಕೆಲ ಮೂಲಗಳ ಪ್ರಕಾರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಡಿಸಿಎಂ ಲಕ್ಷ್ಮಣ ಸವದಿಯನ್ನು ಕೂರಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡುತ್ತಿದೆ. ಹೀಗಾಗಿಯೇ ಲಕ್ಷ್ಮಣ್ ಸವದಿ, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ, ಸಿಎಂ ಯಡಿಯೂರಪ್ಪ ಕೂಡ ಖುರ್ಚಿ ಬಿಟ್ಟುಕೊಡಲು ಮಾನಸಿಕವಾಗಿ ಸಜ್ಜಾಗಿದ್ದಾರೆ. ಡಿಸೆಂಬರ್ ತನಕ ಸುಮ್ಮನಿರಬೇಕು. ಆನಂತರ ನಾನು ಹೇಳಿದ ವ್ಯಕ್ತಿಯನ್ನೇ ಸಿಎಂ ಮಾಡಬೇಕು ಎಂದು ಯಡಿಯೂರಪ್ಪ ಹೈಕಮಾಂಡ್‍ಗೆ ಷರತ್ತು ಹಾಕಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ ಎನ್ನಲಾಗಿದೆ.
ಹಾಗಾದ್ರೆ, ಆಪರೇಷನ್ ಕಮಲ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಮೈತ್ರಿ ಸರ್ಕಾರ ಪತನಗೊಳಿಸಿ ಸಿಎಂ ಆಗಲು ಯಡಿಯೂರಪ್ಪ ತುದಿಗಾಲ ಮೇಲೆ ನಿಂತಿದ್ದಾಗ ಬಿಜೆಪಿ ಹೈಕಮಾಂಡ್ ಷರತ್ತು ಹಾಕಿತ್ತಾ..? ನಿಮಗೆ ಒಂದೇ ವರ್ಷ ಅವಧಿ, ನಿಮ್ಮ ನಂತರ ಪರ್ಯಾಯ ನಾಯಕತ್ವ ಬೆಳೆಸುವ ಸಲುವಾಗಿ ನೀವು ಖುರ್ಚಿಯಿಂದ ಕೆಳಗೆ ಇಳಿಯಬೇಕಾಗುತ್ತದೆ ಎಂದು ಷರತ್ತು ಹಾಕಿತ್ತಾ..? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇತ್ತೀಚೆಗೆ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನಲಾಗಿತ್ತು. ಆಪರೇಶನ್ ಕಮಲ ಕಾರ್ಯಾಚರಣೆಯಲ್ಲಿ ಸಿ.ಪಿ ಯೋಗೇಶ್ವರ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಎಂಎಲ್‍ಸಿ ಸ್ಥಾನ ಪಕ್ಕಾ ಎಂದೇ ಹೇಳಲಾಗಿತ್ತು.
ಆದರೆ, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್‍ಗೆ ಟಿಕೆಟ್ ಕೊಟ್ಟು ಯೋಗೇಶ್ವರ್‍ಗೆ ನಿರಾಸೆ ಮೂಡಿಸಲಾಗಿತ್ತು. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ತನಗೆ ಭವಿಷ್ಯ ಇಲ್ಲ. ಸಿಎಂ ಯಡಿಯೂರಪ್ಪ ಕೂಡ ಅಧಿಕಾರದಲ್ಲಿ ಇರುವುದಿಲ್ಲ. ಹೀಗಾಗಿ ಕಾಂಗ್ರೆಸ್‍ಗೆ ಹೋಗುವ ಬಗ್ಗೆ ಯೋಗೇಶ್ವರ್ ಮನಸು ಮಾಡಿದ್ದಾರಾ ಅನ್ನೋ ಮಾತುಗಳಿಗೆ ಡಿಕೆಶಿ ಹೇಳಿಕೆ ಪುಷ್ಠಿ ನೀಡುತ್ತಿದೆ.
ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ
ಬಹು ದಿನಗಳ ತೀವ್ರ ಕುತೂಹಲ ಹಾಗೂ ಒಳಮನೆ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ನಾಯಕ,...








