ಸಿಎಂ ಸ್ಥಾನಕ್ಕೆ ರಾಜೀನಾಮೆ : ಕಣ್ಣೀರಿಟ್ಟ ಬಿಎಸ್ ವೈ – ಸಹಿಸಲಾಗದೇ ಅಭಿಮಾನಿ ನೇಣಿಗೆ ಶರಣು..!
ಚಾಮರಾಜನಗರ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿ ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಾರೆ.. ಆದ್ರೆ ರಾಜೀನಾಮೆ ಘೋಷಣೆ ವೇಳೆ ಬಿಎಸ್ ವೈ ಕಣ್ಣೀರಿಟ್ಟಿದ್ದಾರೆ. ಬಿಎಸ್ ವೈ ಭಾವುಕರಾಗಿದ್ದನ್ನ ನೋಡಿ ಸಹಿಸಿಕೊಳ್ಳಲಾಗದೇ ಮನನೊಂದು ಬಿಎಸ್ ವೈ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
35 ವರ್ಷದ ರವಿ ಮೃತ ದುರ್ದೈವಿ. ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಯಡಿಯೂರಪ್ಪನವರ ಕಟ್ಟಾ ಅಭಿಮಾನಿಯಾಗಿದ್ದರರು. ನಿನ್ನೆ ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ಕೊಡುತ್ತಿದ್ದಂತೆ ಮಂಕಾಗಿದ್ದ ರವಿ , ರಾಜೀನಾಮೆ ಘೋಷಣೆಯ ವಿಡಿಯೋವನ್ನು ಪದೇಪದೆ ನೋಡಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪನವರು , ಅಭಿಮಾನ ಅತೀರೇಕಕ್ಕೆ ಹೋಗಬಾರದೆಂದು ಕೈ ಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿಂದಿಗೆ ನಾನಿರುವೆ ಎಂದಿದ್ದಾರೆ.








