ಬೆಂಗಳೂರು : ಇಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶುಭಕೋರಿದ್ದಾರೆ.
“ಹಿರಿಯ ರಾಜಕಾರಣಿಗಳು, ಸಂಸದರೂ ಆಗಿರುವ ಆತ್ಮೀಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭಾಶಯಗಳು. ದೇವರ ನಿಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ” ಎಂದು ಸಿಎಂ ಶುಭಕೋರಿದ್ದಾರೆ.
ರಾಮುಲು ಟ್ವೀಟ್
“ಹಿರಿಯ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ರಾಜ್ಯಸಭೆ ಸದಸ್ಯ, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಮ್ಮ ಅನುಕರಣೀಯ ಸಾರ್ವಜನಿಕ ಸೇವೆ ಸುದೀರ್ಘ ರಾಜಕೀಯ ಜೀವನಾನುಭವ ಎಲ್ಲ ಪೀಳಿಗೆಗೂ ಅಗತ್ಯವಾಗಿದ್ದು, ದೇವರು ನಿಮಗೆ ಆಯುರಾರೋಗ್ಯ ನೀಡಿ ಹರಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬಿ.ಶ್ರೀರಾಮುಲು ಖರ್ಗೆಗೆ ಶುಭಕೋರಿದ್ದಾರೆ.
ರಾಜ್ಯದ ಹಿರಿಯ ನಾಯಕ, ಮಾಜಿ ಸಚಿವ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಕಾಲ ನಾಡಿನ ಸೇವೆ ಮಾಡುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ..








