ಬೆಂಗಳೂರು: ಶಿವಮೊಗ್ಗದಲ್ಲಿ ಮುಕ್ತಾಯಗೊಂಡ ಬಿಜೆಪಿ ಕೋರ್ ಕಮಿಟಿ ಹಾಗೂ ವಿಶೇಷ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪಕ್ಷದ ಶಾಸಕರ ಅಸಮಾಧಾನ ತಣಿಸಿ, ಅವರ ವಿಶ್ವಾಸ ಗಳಿಸಲು ಇಂದು ಹಾಗೂ ನಾಳೆ ಖಾಸಗಿ ಹೋಟೆಲ್‍ನಲ್ಲಿ ಸರಣಿ ಸಭೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಅಸಮಾಧಾನ ಕಡಿಮೆ ಮಾಡುವುದು, ಸಂಪುಟ ವಿಸ್ತರಣೆ ಸಂಬಂಧ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವುದು, ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ರೂಪಿಸುವುದು, ಅದಕ್ಕೆ ಅನುದಾನ ಬಿಡುಗಡೆ ಮಾಡುವುದು, ಅಧಿಕಾರಿಗಳ ವರ್ಗಾವಣೆ ಬೇಡಿಕೆಗಳಿದ್ದರೆ ಈಡೇರಿಸುವುದು ಸೇರಿದಂತೆ ಶಾಸಕರ ಕಷ್ಟ-ಸುಖಗಳನ್ನು ಆಲಿಸಲು ಮುಂದಾಗಿದ್ದಾರೆ.

ಶಿವಮೊಗ್ಗದ ಕಾರ್ಯಕಾರಣಿಯಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುವ ಯತ್ನಾಳ್ ಸೇರಿದಂತೆ ಹಲವರ ವಿರುದ್ಧ ಅರುಣ್‍ಸಿಂಗ್ ಕಿಡಿಕಾರಿದ ಬೆನ್ನಲ್ಲೇ ಯಡಿಯೂರಪ್ಪ ಫುಲ್ ಆಕ್ಟಿವ್ ಆಗಿದ್ದಾರೆ.
ಸದ್ಯದಲ್ಲೇ ಈ ವರ್ಷದ ಬಜೆಟ್‍ಗೆ ಸಿದ್ದತೆ ಮಾಡಿಕೊಳ್ಳಲಿರುವ ಯಡಿಯೂರಪ್ಪ, ಪಕ್ಷದ ಶಾಸಕರ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ, ಮುಂದೆ ರೂಪಿಸಲಿರುವ ಯೋಜನೆಗಳು, ಬಜೆಟ್‍ನಲ್ಲಿ ಯೋಜನೆ ಘೋಷಣೆ ಹಾಗೂ ಅನುದಾನ ಹಂಚಿಕೆ ಬಗ್ಗೆ ಶಾಸಕರಿಂದ ಮನವಿ, ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.
ಯಾವ ಹೊತ್ತಿಗೆ ಯಾವ ಶಾಸಕರ ಸಭೆ..
* ಬೆಳಿಗ್ಗೆ 11ರಿಂದ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಸಭೆ
* ಮಧ್ಯಾಹ್ನ 3ರಿಂದ ಮುಂಬೈ, ಮಧ್ಯ ಕರ್ನಾಟಕ ಭಾಗದ ಶಾಸಕರ ಸಭೆ
* ಸಂಜೆ 6ಗಂಟೆಯಿಂದ ಕರಾವಳಿ ಭಾಗದ ಶಾಸಕ ಸಭೆ
ನಾಳೆ..
* 11 ಗಂಟೆಯಿಂದ ಮಲೆನಾಡು ಹಾಗೂ ಹಳೆಯ ಮೈಸೂರು ಭಾಗದ ಶಾಸಕರ ಮೀಟಿಂಗ್
* ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು ಶಾಸಕರ ಸಭೆ
* ಸಂಜೆ 2 ಗಂಟೆಯಿಂದ ಬೆಂಗಳೂರು ನಗರ ವ್ಯಾಪ್ತಿಯ ಸಭೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








