ಹುಬ್ಬಳ್ಳಿ: ಬಿಜೆಪಿ ಸರ್ಕಾರ ಯಾವ ಸಂದರ್ಭದಲ್ಲಾದರೂ ಬೀಳಬಹುದು, ಹೀಗಾಗಿ ಯಡಿಯೂರಪ್ಪ ಬಹಳ ದಿನ ಸಿಎಂ ಆಗಿ ಇರುವುದಿಲ್ಲ. ಹೀಗಂತ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಶಿಸ್ತಿನ ಪಕ್ಷ ಅಂತಾ ಹೇಳಿಕೊಳ್ಳುವ ಬಿಜೆಪಿಯವರು ಇದುವರೆಗೂ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದ್ರೆ ಬಹಳಷ್ಟು ಬಿಜೆಪಿ ನಾಯಕರ ಬೆಂಬಲ ಯತ್ನಾಳ್ ಅವರಿಗಿದೆ ಅನ್ನೋದು ಸ್ಪಷ್ಟ ಎಂದರು.
ಬಿಜೆಪಿ ಪಕ್ಷದೊಳಗಿನ ಬೆಂಕಿ ಯಾವ ಸಂದರ್ಭದಲ್ಲಾದರೂ ಹೊತ್ತಿ ಉರಿಯಬಹುದು. ಯಾವುದೇ ಪಕ್ಷದ ಶಾಸಕರು ಮತ್ತೆ ಚುನಾವಣೆಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಬಿದ್ದರೆ ಏನು ಬೇಕಾದರೂ ಬೆಳವಣಿಗೆ ಆಗಬಹುದು. ವಿಧಾನ ಪರಿಷತ್ ಮತ್ತು ಉಪ ಚುನಾವಣೆ ಫಲಿತಾಂಶದ ನಂತರ ರಾಜಕೀಯ ಬದಲಾವಣೆಗಳು ಆಗಲಿವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಹ್ಯ ಸಭೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ವಲಯದಲ್ಲಿ ಕಸರತ್ತು ನಡೆದಿರುವ ಬೆನ್ನಲ್ಲೇ, ಬಿಜೆಪಿಯ ನಾಯಕರು ಹುಬ್ಬಳ್ಳಿಯಲ್ಲಿ ರಹಸ್ಯ ಸಭೆ(secret meeting) ನಡೆಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರೊಬ್ಬರನ್ನು ಯಡಿಯೂರಪ್ಪ ಸ್ಥಾನಕ್ಕೆ ತಂದು ಮುಖ್ಯಮಂತ್ರಿ ಮಾಡಲು ಬಿಜೆಪಿಯಲ್ಲಿ ತೆರೆಮರೆಯ ರಾಜಕೀಯ ಬೆಳವಣಿಗೆ ನಡೆದಿರುವ ಬೆನ್ನಲ್ಲೇ, ಉತ್ತರ ಕರ್ನಾಟಕ ಭಾಗದ ನಾಯಕರು ಸಭೆ ನಡೆಸಿದ್ದಾರೆ.
ರಾತ್ರೋರಾತ್ರಿ ಹುಬ್ಬಳ್ಳಿಯ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉ.ಕ ಭಾಗದ ನಾಯಕರ ಸಭೆ ನಡೆದಿರುವುದು ಕುತೂಹಲ ಮೂಡಿಸಿದೆ. ಸಭೆಯಲ್ಲಿ ಶಾಸಕರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ, ರಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಅಣ್ಣಾಸಾಬ ಜೊಲ್ಲೆ, ಸಂಗಣ್ಣ ಕರಡಿ ಭಾಗಿಯಾಗಿದ್ದರು.
ಡಿಸಿಸಿ ಬ್ಯಾಂಕ್ ಚುನಾವಣೆ ಹಾಗೂ ದಿ. ಸುರೇಶ ಅಂಗಡಿ ಅವರ ನಿಧನಿದಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಬೆಂಬಲಿಸುವುದಗಿ ಕಾಂಗ್ರೆಸ್ ಹಿರಿಯ ಮುಖಂಡ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಂಜಲಿ ನಿಂಬಾಳ್ಕರ್ ಗೆ ಬೆಂಬಲ ನೀಡುವುದಾಗಿ ಹೇಳಿದ್ದ ಉಮೇಶ ಕತ್ತಿ ಹೇಳಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಏಕಾಏಕಿ ಗುಪ್ತ ಸಭೆಯ ಉದ್ದೇಶ ಏನು..?
ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರ ಜೊತೆ ಚರ್ಚೆಯ ಮರ್ಮವೇನು..? ಎಂಬ ಪ್ರಶ್ನೆ ಎದುರಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel