ಬೆಂಗಳೂರು: ಸತತ ಹೈಡ್ರಾಮದ ಬಳಿಕ ಕಿಕ್ಭೀತಿಯಿಂದ ಅಬಕಾರಿ ಸಚಿವ ಹೆಚ್.ನಾಗೇಶ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿದ್ದಾರೆ. ಯಾವುದೇ ಕಾರಣಕ್ಕೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಕೂಡ ಬಿಜೆಪಿ ಸರ್ಕಾರ ಬರಲು ಕಾರಣಕರ್ತರಲ್ಲಿ ಒಬ್ಬನಾಗಿದ್ದೇನೆ. ನಾನೇನು ತಪ್ಪು ಮಾಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ನಾನು ರಾಜೀನಾಮೆ ಕೊಡಬೇಕಾಗಿರುವ ಕಾರಣ ಕೊಡಬೇಕು ಎಂದು ಅಬಕಾರಿ ಸಚಿವ ನಾಗೇಶ್ ಪಟ್ಟುಹಿಡಿದಿದ್ದರು.
ತಮ್ಮ ಕೊನೆಯ ಸಚಿವ ಸಂಪುಟ ಸಭೆಗೆ ಬಂದಿದ್ದ ನಾಗೇಶ್, ನಾನು ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಹೆಚ್. ನಾಗೇಶ್ ಅವರ ಮನವೊಲಿಕೆ ಮಾಡಿ, ರಾಜೀನಾಮೆ ನೀಡಲು ಒಪ್ಪಿಸಿದ್ದಾರೆ. ಮುಂದೆ ನೋಡೋಣ, ಈಗ ಸದ್ಯಕ್ಕೆ ರಾಜೀನಾಮೆ ಕೊಡು. ಇದು ನನ್ನ ತೀರ್ಮಾನವಲ್ಲ. ಹೈಕಮಾಂಡ್ನಿಂದ ಬಂದ ಸೂಚನೆ. ಹೀಗಾಗಿ ನಿನಗೆ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಸ್ಥಾನ ಕೊಡುವುಆಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಕಿಕ್ಔಟ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರಿಂದ ಬೆದರಿದ `ಎಣ್ಣೆ’ (ಅಬಕಾರಿ) ಸಚಿವ ಹೆಚ್.ನಾಗೇಶ್ ರಾಜೀನಾಮೆಗೆ ಒಪ್ಪಿದರು ಎನ್ನಲಾಗಿದೆ.
ರಾಜೀನಾಮೆಗೆ ಸೂಚಿಸಿದ ಬಳಿಕ ಬೇಸರದಿಂದಲೇ ಕ್ಯಾಬಿನೆಟ್ ಸಭೆಯಿಂದ ಹೊರಬಂದ ಹೆಚ್. ನಾಗೇಶ್ ಪರ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಗೋಪಾಲಯ್ಯ, ನಾರಾಯಣಗೌಡ, ಸಿಎಂ ಯಡಿಯೂರಪ್ಪ ಮನವೊಲಿಸುವ ಯತ್ನ ನಡೆಸಿದರೂ ಸಫಲವಾಗಲಿಲ್ಲ.
ಕೊನೆಕ್ಷಣದವರೆಗೂ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಹೆಚ್. ನಾಗೇಶ್ ಅವರಿಗೆ ಈ ಬೆಳವಣಿಗೆಯಿಂದ ತೀವ್ರ ಮುಖಭಂಗವಾದಂತಾಗಿದೆ.
ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಆರ್. ಶಂಕರ್, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಎಸ್. ಅಂಗಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭ್ರಮದಲ್ಲಿದ್ದರೆ, ಹೆಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪ್ರಸಂಗ ಎದುರಾಗಿದೆ. ಇದು ಬಿಜೆಪಿಗೆ ವಲದೆ ಬಂದ ಶಾಸಕರ ಅಸಮಾಧಾನಕ್ಕೂ ಕಾರಣವಾಗಿದೆ.
ನಾನೇ ಟನಿರ್ಂಗ್ ಪಾಯಿಂಟ್..!
ರಾಜ್ಯದಲ್ಲಇ ಬಿಜೆಪಿ ಸರ್ಕಾರ ರಚನೆಗೆ ನನ್ನಿಂದಲೇ ಟನಿರ್ಂಗ್ ಪಾಯಿಂಟ್ ಸಿಕ್ಕಿತು. ನೀನು ಮೂರೂವರೆ ವರ್ಷ ಸಚಿವನಾಗಿರುತ್ತೀಯ ಎಂದು ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದಾರೆ. ಯಡಿಯೂರಪ್ಪ ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಎಂಬ ವಿಶ್ವಾಸ ನನಗಿದೆ. ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ ಎಂದು ಹೆಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಆಮೇಲೆ ಅಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಬಂದವನು. ಆಗ ನನ್ನನ್ನು ಎಷ್ಟೋ ಜನರು ಏನೇನೋ ಟೀಕೆ ಮಾಡಿದ್ದರು. ಹೀಗಿದ್ದರೂ ನಾನು ಅಲ್ಲಿ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನ್ನ ರೀತಿ ಯಾರು ಮಾಡ್ತಾರೆ ಹೇಳಿ? ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಬಿಜೆಪಿ ಸರ್ಕಾರ ಬರೋದಕ್ಕೂ ನಾನೇ ಟನಿರ್ಂಗ್ ಪಾಯಿಂಟ್ ಎಂದು ನಾಗೇಶ್ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel