ತುಮಕೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆಂದು ವರಿಷ್ಠರ ಒಪ್ಪಿಗೆ ಪಡೆಯಲು ದೆಹಲಿಗೆ ಹೋಗಿ ಬರಿಗೈಲಿ ಬಂದಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆಯ ಮುನ್ಸೂಚನೆ ಎಂದು ಮಾಜಿ ಸಚಿವ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಯಡಿಯೂರಪ್ಪ ಅವರನ್ನೇ ಮುಂದುವರೆಸುವುದಾದರೆ ಅವರ ಲಿಸ್ಟ್‍ಗೆ ಅನುಮತಿ ಸಿಗಬೇಕಿತ್ತು. ಅಮಿತ್ ಶಾ ಅವರನ್ನು ಭೇಟಿ ಮಾಡಲು ಯಡಿಯೂರಪ್ಪ ಸಮಯ ಕೇಳಿದ್ದರೂ ಈವರೆಗೆ ಅವಕಾಶ ಕೊಟ್ಟಿಲ್ಲ. ಇದು ಕರ್ನಾಟಕ ಜನತೆಗೆ ಮಾಡಿದ ಅಪಮಾನ. ಇದು ನಿಜಕ್ಕು ಖಂಡನೀಯ.
ಅಮಿತ್ ಶಾ ಕೇವಲ ಗೃಹಮಂತ್ರಿ, ಯಡಿಯೂರಪ್ಪ ಒಂದು ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ. ಬಿಜೆಪಿ ಅನ್ನೋದಕ್ಕಿಂತ ನಮ್ಮ ರಾಜ್ಯದ ನಾಯಕರು, ಇದು ವರಿಗೆ ಮಾಡಿರುವ ಅವಮಾನ ಅಲ್ಲ, ಬದಲಿಗೆ ಕರ್ನಾಟಕ ಜನರಿಗೆ ಮಾಡಿದ ಅವಮಾನ. ಇಂದು ನಾನು ಖಂಡಿಸುತ್ತೇನೆ ಎಂದು ಕೆ.ಎನ್ ರಾಜಣ್ಣ ಕಿಡಿ ಕಾಡಿದರು.
ಶಿರಾದಲ್ಲಿ ಬಿಜೆಪಿ ಸುಳ್ಳು ಭರವಸೆ
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆದಿದೆ. ಕಾಂಗ್ರೆಸ್ ಮುಖಂಡರು ಉಪ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕಾಡುಗೊಲ್ಲರಿಗೆ ನಿಗಮ, ಎಸ್ಟಿಗೆ ಸೇರಿಸುತ್ತೇನೆ ಎಂದು ಸುಳ್ಳು ಭರವಸೆ ನೀಡಿದ್ದಾರೆ ಎಂದು ಕೆ.ಎನ್ ರಾಜಣ್ಣ ಆರೋಪಿಸಿದ್ದಾರೆ.
ಬೋವಿ ಸಮುದಾಯಕ್ಕೆ ರಾತ್ರೋರಾತ್ರಿ ಕಲ್ಲುಕ್ವಾರಿಗೆ ಅನುಮತಿ ನೀಡಿ, ಎಡಗೈ ಸಮುದಾಯಕ್ಕೆ ಸದಾಶಿವ ಆಯೋಗದ ಶಿಫಾರಸು ಜಾರಿ ಮಾಡುವ ಭರವಸೆ ನೀಡಿದ್ದಾರೆ. ಮದಲೂರು ಕೆರೆಗೆ 6 ತಿಂಗಳಲ್ಲಿ ನೀರು ಹರಿಸುತ್ತೇವೆ ಎಂದಿದ್ದಾರೆ. ಅಧಿಕಾರದಲ್ಲಿ ಇರುವವರು ಏನೇ ಹೇಳಿದ್ರೂ ಜನರು ನಂಬುತ್ತಾರೆ. ಪ್ರಚಾರಕ್ಕಾಗಿ ಇಂತಹ ಭರವಸೆ ನೀಡಿ ಬಿಜೆಪಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕೆ.ಎನ್ ರಾಜಣ್ಣ ವಾಗ್ದಾಳಿ ನಡೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel