ಕನ್ನಡಪರ ಸಂಘಟನೆಗಳಿಗೆ ಬಿಎಸ್ ವೈ ಖಡಕ್ ವಾರ್ನಿಂಗ್
ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.
ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಅನಾವಶ್ಯಕವಾಗಿ ಬಂದ್ ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಕನ್ನಡಪರ ಸಂಘಟನೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಡಿ. 5 ರಂದು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ನಾನು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇರುವಂಥವನು.
ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ನಾವು ಸಿದ್ಧ. ಬೇರೆ ಬೇರೆ ಕಾರಣಗಳಿಗಾಗಿ ಬಂದ್ ಕರೆ ಕೊಡುವುದು ಸೂಕ್ತ ಅಲ್ಲ.
ಬೈ ಎಲೆಕ್ಷನ್ ತಯಾರಿಯಲಿದ್ದ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಸಮನ್ಸ್
ರಾಜ್ಯದ ಜನ ಇದನ್ನು ಮೆಚ್ಚುವುದಿಲ್ಲ. ಬಲವಂತದಿಂದ ಎಲ್ಲೂ ಬಂದ್ ಮಾಡಲು ತಾವು ಅವಕಾಶ ಕೊಡುವುದಿಲ್ಲ. ಅನಾವಶ್ಯಕವಾಗಿ ಬಂದ್ ಮಾಡಿದರೆ ನಾನು ಸಹಿಸುವುದಿಲ್ಲ.
ನಾನು ಎಲ್ಲವನ್ನು ಗಮನಿಸುತ್ತಿದ್ದೇನೆ. ಪ್ರತಿಕೃತಿ ದಹಿಸೋದು, ಬಂದ್ ಮಾಡೋದು ಸರಿಯಲ್ಲ.
ಶಾಂತಿಯುತವಾಗಿ ಬೇಕಾದರೆ ಪ್ರತಿಭಟನೆ ಮಾಡಲಿ.
ವಿನಾಕಾರಣ ಬಂದ್ ಮಾಡಿದ್ರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಎಲ್ಲ ವರ್ಗಗಳಿಗೂ ಸರ್ಕಾರ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಸರ್ಕಾರ ಯಾರ ನಡುವೆಯೂ ಭೇದ ಭಾವ ಮಾಡುತ್ತಿಲ್ಲ.
ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಬೇಕು ಎಂದು ಬಿಎಸ್ ವೈ ಮನವಿ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










