ADVERTISEMENT
Monday, March 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಎಸ್‍ವೈ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ: ರಾಜಕೀಯ ಒತ್ತಡವೋ..ಕೌಟುಂಬಿಕ ಕಲಹವೋ..?

Kariyappa N by Kariyappa N
November 28, 2020
in Newsbeat, Politics, Samagra karnataka, ರಾಜ್ಯ
sucide attempt
Share on FacebookShare on TwitterShare on WhatsappShare on Telegram

Related posts

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

March 23, 2026
ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

March 23, 2026

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಳೆದ ರಾತ್ರಿ ಸದಾಶಿವ ನಗರದ ಮನೆಯಲ್ಲಿಯೇ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

. sucide attempt

ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಎನ್.ಆರ್ ಸಂತೋಷ್, ಇಂದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಸಿಎಂ ಯಡಿಯೂರಪ್ಪ ಬೆಳಿಗ್ಗೆಯೇ ರಾಮಯ್ಯ ಆಸ್ಪತ್ರೆಗೆ ತೆರಳಿ ಸಂತೋಷ್ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ನನ್ನ ಜತೆಗೂ ಮಾತನಾಡಿದ್ದಾನೆ, ನಾನು ಧೈರ್ಯ ಹೇಳಿದ್ದೇನೆ ಎಂದು ತಿಳಿಸಿದರು.

ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಯತ್ನ: ಪತ್ನಿ ಜಾಹ್ನವಿ
ನನ್ನ ಪತಿ, ನಾವು ಚೆನ್ನಾಗಿಯೇ ಇದ್ದೇವೆ. ನಮ್ಮ ದಾಂಪತ್ಯದಲ್ಲಿ ಯಾವುದೇ ಬಿರುಕು ಇಲ್ಲ. ಯಾರೋ ಕೆಲವರು ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಸಂತೋಷ್ ಪತ್ನಿ ಜಾಹ್ನವಿ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳಿಂದ ರಾಜಕೀಯ ಒತ್ತಡದಿಂದ ಬಳಲುತ್ತಿದ್ದ ಎನ್.ಆರ್ ಸಂತೋಷ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಬೇಸರ ಹಾಗೂ ಒತ್ತಡದಲ್ಲಿದ್ದಾಗ ಹೆಚ್ಚು ಪುಸ್ತಕ ಓದುತ್ತಿದ್ದರು. ನಿನ್ನೆಯೂ ಸಹ ಹೊರಗಡೆ ಹೋಗಿ ಬಂದವರು ಪುಸ್ತಕ ಓದಲು ಕುಳಿತಿದ್ದರು. ಯಾವಾಗಲೂ ನಿದ್ರೆ ಮಾತ್ರೆ ಸೇವಿಸಿದ್ದರು. ಆದ್ರೆ ನಿನ್ನೆ ಹೆಚ್ಚು ನಿದ್ರೆ ಮಾತ್ರೆ ಸೇವಿಸಿದ್ದಾರೆಂದು ಗೊತ್ತಾಗಲಿಲ್ಲ. ಹೀಗಾಗಿ ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣವಿರಬಹುದು ಎಂದು ಪತ್ನಿ ಜಾಹ್ನವಿ ಶಂಕೆ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಸೂಚಿಸಿದ್ದೇ ಕಾರಣವಾಯ್ತಾ..?
ಕಳೆದ ಮೇ.28ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಎನ್.ಆರ್ ಸಂತೋಷ್‍ಗೆ ಇತ್ತೀಚೆಗೆ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಯಡಿಯೂರಪ್ಪ ಅವರ ಆಗುಹೋಗುಗಳನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದ ಸಂತೋಷ್‍ಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಒತ್ತಡ ಹೆಚ್ಚಾಗಿತ್ತು ಎಂಬ ವದಂತಿಗಳು ಹರಿದಾಡುತ್ತಿವೆ. ರಾಜೀನಾಮೆ ಕೊಡುವಂತೆ ಯಾರು ಒತ್ತಡ ಹಾಕಿದ್ದರು ಎಂಬುದು ಗೊತ್ತಿಲ್ಲ. ಆದರೆ, ಈ ಒತ್ತಡದಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾರಾ ಎನ್ನಲಾಗುತ್ತಿದೆ.

ಯಾರು ಈ ಎನ್.ಆರ್ ಸಂತೋಷ್..!
ಎನ್.ಆರ್ ಸಂತೋಷ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿ, ಅವರ ಆಗುಹೋಗುಗಳನ್ನು ಚಾಚೂತಪ್ಪದೆ ಮಾಡುತ್ತಿದ್ದರು. ಯಡಿಯೂರಪ್ಪ ಬೆಳಿಗ್ಗೆ ಎದ್ದ ಮೇಲೆ ಇಂದ ರಾತ್ರಿ ಮಲಗುವ ತನಕ ಅವರ ಸಂಪೂರ್ಣ ಕಾಳಜಿ ವಹಿಸುತ್ತಿದ್ದವರು ಸಂತೋಷ್.


ತುಂಬಾ ನಂಬಿಗಸ್ತನಾಗಿದ್ದ ಎನ್.ಆರ್ ಸಂತೋಷ್ ಅವರನ್ನು ಯಡಿಯೂರಪ್ಪ ಅವರು, ಕಳೆದ ಹಲವು ವರ್ಷಗಳಿಂದ ಪಿಎ ಆಗಿ ನೇಮಕ ಮಾಡಿಕೊಂಡಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಆಪರೇಷನ್ ಕಮಲಕ್ಕಾಗಿ ನಡೆಯುತ್ತಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಸಂತೋಷ್ ಕೂಡ ಪ್ರಮುಖ ಪಾತ್ರವಹಿಸಿದ್ದರು.
ಅತೃಪ್ತ ಶಾಸಕರನ್ನು ಬೆಂಗಳೂರು, ಮುಂಬೈ, ಗೋವಾ ಸೇರಿದಂತೆ ರೆಸಾರ್ಟ್, ಪಂಚಾತಾರಾ ಹೋಟೆಲ್‍ಗಳಲ್ಲಿ ರಹಸ್ಯವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಹಾಗೂ ಆತೃಪ್ತ ಶಾಸಕರನ್ನು ಕರೆದೊಯ್ಯಲು ವಿಶೇಷ ವಿಮಾನಗಳ ವ್ಯವಸ್ಥೆ, ರಹಸ್ಯ ಸ್ಥಳಕ್ಕೆ ಕರೆದೊಯ್ದು ಸುರಕ್ಷಿತವಾಗಿ ಬಿಡುವುದರವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಎನ್.ಆರ್ ಸಂತೋಷ್ ವಹಿಸಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕರೇ ಅಂದು ಆರೋಪಿಸಿದ್ದರು. ಈ ಸಂಬಂಧದ ವಿಡಿಯೋ, ಫೋಟೋಗಳನ್ನು ಬಿಡುಗಡೆ ಮಾಡಿದ್ದರು.
22ನೇ ವಯಸ್ಸಿನಲ್ಲಿಯೇ ಯಡಿಯೂರಪ್ಪ ಪಿಎ ಆಗಿ ಸೇರಿಕೊಂಡಿದ್ದ ಸಂತೋಷ್, ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರು. ಕೃಷಿ ಕುಟುಂಬದಿಂದ ಬಂದ ಸಂತೋಷ್, ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದರು. 2006ರಿಂದ 2012ರವರೆಗೆ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ.
ಅರಸೀಕೆರೆ ಕ್ಷೇತ್ರದಿಂದ ಎಂಎಲ್‍ಎ ಆಗಿ ಗೆಲ್ಲುವ ಕನಸು ಹೊಂದಿದ್ದ ಸಂತೋಷ್, ಹಲವು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಳ್ಳುವ ಯತ್ನ ನಡೆಸಿದ್ದರು. ಇವರ ಅರಸೀಕೆರೆ ಎಂಟ್ರಿಗೆ ಬಿಜೆಪಿಯಲ್ಲೇ ಅಪಸ್ವರ ಎದ್ದಿತ್ತು. ಸಂತೋಷ್ ಕೌಟುಂಬಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ಇನ್ನೊಂದು ಬಣ ಅಪಮಾನ ಮಾಡಿತ್ತು ಎನ್ನಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bsy close aidn.r santhoshpolitial secretorysuicide attempt
ShareTweetSendShare
Join us on:

Related Posts

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

ಹೈಕಮಾಂಡ್ ಅಂಗಳದಲ್ಲಿ ಸಮರ್ಥ್ ಗೆಲುವಿನ ನಗು: ಅಲ್ಪಸಂಖ್ಯಾತರ ಮನವೊಲಿಸಿ ದಾವಣಗೆರೆ ಟಿಕೆಟ್ ಗಿಟ್ಟಿಸಿದ ಯುವ ನಾಯಕ

by Shwetha
March 23, 2026
0

ಬಹು ದಿನಗಳ ತೀವ್ರ ಕುತೂಹಲ ಹಾಗೂ ಒಳಮನೆ ಜಟಾಪಟಿಗೆ ಕೊನೆಗೂ ತೆರೆಬಿದ್ದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ನಾಯಕ,...

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

ಧುರಂಧರ್ 2 ಪ್ರೊಪಗಾಂಡ ಸಿನಿಮಾ ಎಂದವರಿಗೆ ಚಳಿ ಬಿಡಿಸಿದ ಅನುಪಮ್ ಖೇರ್ ರಣವೀರ್ ಸಿಂಗ್ ನಟನೆಗೆ ಸಲಾಂ ಎಂದ ಬಾಲಿವುಡ್ ಹಿರಿಯ ನಟ

by Shwetha
March 23, 2026
0

ಬಾಲಿವುಡ್ ಅಂಗಳದಲ್ಲಿ ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಧುರಂಧರ್ 2 ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದು...

ಬೆಂಗಳೂರಿಗರೇ ಎಚ್ಚರ  – ಕುಡಿಯುವ ನೀರು ಪೋಲು ಮಾಡಿದರೆ ಭಾರೀ ದಂಡ : ಜಲಮಂಡಳಿಯಿಂದ ಹೊಸ ರೂಲ್ಸ್ ಜಾರಿ

ಬೆಂಗಳೂರಿಗರೇ ಎಚ್ಚರ – ಕುಡಿಯುವ ನೀರು ಪೋಲು ಮಾಡಿದರೆ ಭಾರೀ ದಂಡ : ಜಲಮಂಡಳಿಯಿಂದ ಹೊಸ ರೂಲ್ಸ್ ಜಾರಿ

by Shwetha
March 23, 2026
0

ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ನಗರದಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾವೇರಿ ನೀರಿನ ಲಭ್ಯತೆಯಲ್ಲೂ ಕೊರತೆ ಎದುರಾಗಿದೆ....

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

ಚುನಾವಣೆಗೂ ಮುನ್ನವೇ ಬಾಗಲಕೋಟೆಯಲ್ಲಿ ಬಿಜೆಪಿ ಆಪರೇಷನ್ ಶುರು: ಕಾಂಗ್ರೆಸ್ ಶಿಬಿರದಲ್ಲಿ ಆತಂಕದ ಕಾರ್ಮೋಡ

by Shwetha
March 23, 2026
0

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಎಚ್ ವೈ ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆ ರಾಜ್ಯ ರಾಜಕಾರಣದಲ್ಲಿ ಭಾರಿ...

ಅಮಿತ್ ಶಾ ಬಳಿ ರಾಜ್ಯ ಕಮಲ ಪಡೆಯ ಜಾತಕ ಬಿಚ್ಚಿಟ್ಟ ಎಚ್ ಡಿ ಕೆ ಮೈತ್ರಿ ಧರ್ಮ ಪಾಲಿಸದ ನಾಯಕರ ಬಗ್ಗೆ ದೂರು!

ಅಮಿತ್ ಶಾ ಬಳಿ ರಾಜ್ಯ ಕಮಲ ಪಡೆಯ ಜಾತಕ ಬಿಚ್ಚಿಟ್ಟ ಎಚ್ ಡಿ ಕೆ ಮೈತ್ರಿ ಧರ್ಮ ಪಾಲಿಸದ ನಾಯಕರ ಬಗ್ಗೆ ದೂರು!

by Shwetha
March 23, 2026
0

ನವದೆಹಲಿ: ಯುಗಾದಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram