BTech chaiwali | ‘ಬಿ.ಟೆಕ್ ಚಾಯ್ವಾಲಿ’ ಸ್ಟಾರ್ಟ್ಅಪ್
ಬಿಹಾರ ವಿದ್ಯಾರ್ಥಿನಿ ಸ್ಟಾರ್ಟ್ ಅಪ್
ದೇಶದಾದ್ಯಂತ ನನ್ನ ಉದ್ಯಮ ವಿಸ್ತರಿಸಬೇಕು
ನಾನು ಜನಕ್ಕೆ ಉದ್ಯೋಗ ನೀಡುವಂತಾಗಬೇಕು
ಕಲಿಕೆಯೊಂದಿಗೆ ಸ್ವಾವಲಂಬಿ ಉಪಾಯ ಮಾರ್ಗ
ಸಾಕಷ್ಟು ಯುವಕ – ಯುವತಿಯರು ವಿದ್ಯಾಭ್ಯಾಸದೊಂದಿಗೆ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಆ ಮೂಲಕ ತನ್ನ ಗುರಿಯತ್ತ ಹೆಜ್ಜೆ ಹಾಕುತ್ತಾರೆ, ಇದಕ್ಕೆ ಉದಾಹರಣೆ ಬಿ.ಟೆಕ್ ಓದುತ್ತಿರುವ ಬಿಹಾರದ ವರ್ಟಿಕಾ ಸಿಂಗ್ ಎಂಬ ವಿದ್ಯಾರ್ಥಿನಿ.
ಫರೀದಾಬಾದ್ ನಲ್ಲಿ ಈಕೆ ‘ಬಿ.ಟೆಕ್ ಚಾಯ್ವಾಲಿ’ ಎಂಬ ಸ್ಟಾರ್ಟ್ಅಪ್ ಆರಂಭಿಸಿ ಜನರ ಗಮನ ಸೆಳೆಯುತ್ತಿದ್ದಾರೆ.

ಹರಿಯಾಣಾದ ಫರೀದಾಬಾದ್ನ ಗ್ರೀನ್ ಫೀಲ್ಡ್ ಬಳಿ ಇವರ ಚಹಾದ ಅಂಗಡಿ ಇದ್ದು, ಸಂಜೆ 5.30 ರಿಂದ ರಾತ್ರಿ 9 ರತನಕ ಮಾತ್ರ ಅಂಗಡಿ ತೆರೆದಿರುತ್ತದೆ.
ಮಸಾಲಾ ಮತ್ತು ಲೆಮನ್ ಚಹಾಕ್ಕೆ ತಲಾ ರೂ. 20. ಸಾದಾ ಚಹಾಕ್ಕೆ ರೂ. 10.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ, ‘ಪದವಿಯನ್ನು ಮುಗಿಸಲು ನಾಲ್ಕು ವರ್ಷಗಳು ಬೇಕಾಗುತ್ತವೆ.
ಅಷ್ಟು ವರ್ಷ ಯಾಕೆ ಸಮಯವನ್ನು ವ್ಯಯಿಸಬೇಕು? ನನ್ನ ಕನಸಿನ ಪುಟ್ಟಪುಟ್ಟ ಹೆಜ್ಜೆಗಳನ್ನು ಈಗಿನಿಂದಲೇ ಶುರು ಮಾಡಿದ್ದೇನೆ.
ನನ್ನ ಚಹಾದ ಅಂಗಡಿ ಮಳಿಗೆಗಳು ಭಾರತದಾದ್ಯಂತ ತೆರೆಯುವಂತಾಗಬೇಕು, ನಾನು ಇನ್ನೊಬ್ಬರಿಗೆ ಕೆಲಸ ಕೊಡುವಂತಾಗಬೇಕು ಎಂದಿದ್ದಾರೆ.







