Budget 2022 – ಚುನಾವಣೆಗಳು ನಡೆಯುತ್ತಲೆ ಇರುತ್ತವೆ, ಅಧಿವೇಶನ ಯಶಸ್ವಿಗೊಳಿಸೋಣ – ಮೋದಿ
ಪಂಚರಾಜ್ಯಗಳ ಚುನಾವಣೆಯ ನಡುವೆಯು ದೇಶದ ಪ್ರಗತಿಯ ವೇಗವನ್ನ ಹೆಚ್ಚಿಸಲು ಎಲ್ಲರೂ ಅಧಿವೇಶನದಲ್ಲಿ ಭಾಗವಹಿಸಬೆಕು ಎಂದು ಮೋದಿ ಆಶಿಸಿದರು. ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಬಜೆಟ್ ಅದಿವೇಶನ ಮಹತ್ವದ್ದಾಗಿದ್ದು ಅದನ್ನ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಅದಿವೇನದ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ ಮೋದಿ ದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳಿದ್ದು ಆರ್ಥಿಕ ಪ್ರಗತಿ ಮತ್ತು ಮೇಡ್ ಇನ್ ಇಂಡಿಯಾ ಲಸಿಕೆ ಮೂಲಕ ಜಗತ್ತಿನಲಲ್ಲಿ ವಿಶ್ವಾಸವನ್ನ ಮೂಡಿಸಬೇಕು ಎಂದು ತಿಳಸಿದರು.
ಶಾಸಕರು ಪೂರ್ಣ ಬದ್ಧತೆಯಿಂದ ಕಲಾಪದಲ್ಲಿ ಭಾಗವಹಿಸಬೇಕು ಎಂದು ಮೋದಿ ಹೇಳಿದರು. ದೇಶವು ಹೊಸ ಆರ್ಥಿಕ ಎತ್ತರವನ್ನು ತಲುಪಲು ಸಹಾಯ ಮಾಡಲು ವೇದಿಕೆ ಸಿದ್ಧವಾಗಿದೆ. “ಮುಕ್ತ ಮನಸ್ಸಿನಿಂದ” ಮತ್ತು “ಸೂಕ್ಷ್ಮತೆ ಮತ್ತು ಉತ್ತಮ ಉದ್ದೇಶದಿಂದ” ಚರ್ಚೆಗಳನ್ನು ನಡೆಸಬೇಕು ಎಂದು ಮೋದಿ ಒತ್ತಿ ಹೇಳಿದರು.








