Budget 2022 – ಕೇಂದ್ರ ಸರ್ಕಾರದ 4 ಪ್ರಮುಖ ಆದ್ಯತೆ ತಿಳಿಸಿದ ಹಣಕಾಸು ಸಚಿವೆ…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಕೇಂದ್ರ ಬಜೆಟ್ 2022 ಭಾಷಣದಲ್ಲಿ ಸರ್ಕಾರದ ನಾಲ್ಕು ಪ್ರಮುಖ ಆದ್ಯತೆಗಳನ್ನು ವಿವರಿಸಿದ್ದಾರೆ. ಈ ನಾಲ್ಕು ಪ್ರಮುಖ ಆದ್ಯತೆಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಗತಿ ಶಕ್ತಿಯೂ ಸೇರಿದೆ.
ಸರ್ಕಾರದ ನಾಲ್ಕು ಪ್ರಮುಖ ಆದ್ಯತೆಗಳು
ನಾವು ಈ ಕೆಳಗಿನ ನಾಲ್ಕು ವಿಷಯಗಳಿಗೆ ಆದ್ಯತೆಗಳನ್ನು ನೀಡುತ್ತೇವೆ – 1. ಪ್ರಧಾನ ಮಂತ್ರಿ ಗತಿ ಶಕ್ತಿ, 2. ಅಂತರ್ಗತ ಅಭಿವೃದ್ಧಿ, 3. ಉತ್ಪಾದಕತೆ ವರ್ಧನೆ ಮತ್ತು ಹೂಡಿಕೆ, 4 .ಸೂರ್ಯೋದಯ ಅವಕಾಶಗಳು, ಶಕ್ತಿ ಪರಿವರ್ತನೆ ಮತ್ತು ಹವಾಮಾನ ಕ್ರಮ” ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದರು.
PM ಗತಿ ಶಕ್ತಿ
2021 ರ ಅಕ್ಟೋಬರ್ನಲ್ಲಿ ಪ್ರಾರಂಭವಾದ ಮಲ್ಟಿ-ಮೋಡಲ್ ಕನೆಕ್ಟಿವಿಟಿಗಾಗಿ PM ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಆಗಿದೆ. ಮೂಲಸೌಕರ್ಯ ಯೋಜನೆಗಳನ್ನ ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾಗಿದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಗತಿ ಶಕ್ತಿಯು ಡಿಜಿಟಲ್ ವೇದಿಕೆಯಾಗಿದ್ದು, ರೈಲ್ವೆ ಮತ್ತು ರಸ್ತೆಮಾರ್ಗಗಳು ಸೇರಿದಂತೆ 16 ಸಚಿವಾಲಯಗಳ ಅಭಿವೃದ್ಧಿ ಯೋಜನೆಗಳನ್ನು ಸಮಗ್ರ ಯೋಜನೆ ಮತ್ತು ಅನುಷ್ಠಾನಕ್ಕಾಗಿ ಒಟ್ಟಿಗೆ ತರುತ್ತದೆ.








