Budget 2022 – ಯಾವುದು ದುಬಾರಿ ? ಯಾವುದು ಅಗ್ಗ ? ….ಓದಿ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದಾರೆ. ತೆರಿಗೆ ಇಳಿಕೆಯ ಪರಿಣಾಮದಿಂದಾಗಿ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ.
ಈ ಬಾರಿ ಬಜೆಟ್ ನಲ್ಲಿ ಘೋಷಣೆಯಾದ ದುಭಾರಿಯಾದ ಮತ್ತು ಅಗ್ಗದ ವಸ್ತುಗಳು ಇಂತಿವೆ…
ಅಗ್ಗವಾಗಿರುವ ವಸ್ತು/ ಪದಾರ್ಥಗಳ ಪಟ್ಟಿ.
1 ಬಟ್ಟೆ. ಚಪ್ಪಲಿ ಚರ್ಮದ ಉತ್ಪನ್ನಗಳು
2 ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ
3 ವಿದೇಶಿ ಯಂತ್ರೋಪಕರಣಗಳು
4 ಕೃಷಿ ಸರಕುಗಳು
5 ಸ್ಟೀಲ್ ಸ್ಕ್ರಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕ
6 ಮೊಬೈಲ್
7 ಗ್ಯಾಡ್ಜೆಟ್ ಗಳು
8 ಚಿನ್ನ, ವಜ್ರಾಭರಣ – ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಕಡಿಮೆ ಮಾಡಲಾಗಿದೆ
9 ಎಲೆಕ್ಟ್ರಾನಿಕ್ಸ್ ಉಪಕರಣಗಳು- ಮೊಬೈಲ್ ಬಿಡಿಭಾಗಗಳ ಮೇಲಿನ ಬೆಲೆ ಕಡಿಮೆ ಮಾಡಲಾಗಿದ್ದು, ಫೋನ್ ಚಾರ್ಚರ್, ಟ್ರಾನ್ಸ್ಫಾರ್ಮರ್ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ನೀಡಲಾಗಿದೆ
10 ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ
11 ಸಹಕಾರದ ಹೆಚ್ಚುವರಿ ಶುಲ್ಕ ಶೇ.12-7 ಕ್ಕೆ ಇಳಿಕೆ
ಯಾವುದು ದುಬಾರಿ?
1 ಛತ್ರಿಗಳ ಮೇಲಿನ ಸುಂಕ ಏರಿಕೆ
2 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ಅದರಡಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಹೆಚ್ಚಾಗಲಿದೆ.
3 ಆಮದುಮಾಡಿಕೊಳ್ಳಲಾಗುವ ವಸ್ತುಗಳು
4 ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ.
5 ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಯಲಿದೆ.








