ಬೆಂಗಳೂರು ಕರ್ನಾಟಕದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಒಂದು ದೊಡ್ಡ ಸಿಹಿಸುದ್ದಿ ನೀಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026 27 ರ ರಾಜ್ಯ ಬಜೆಟ್ ಅನ್ವಯ ಅಬಕಾರಿ ಇಲಾಖೆಯು ಹೊಸ ಮದ್ಯದ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಅಬಕಾರಿ ನೀತಿಯಿಂದಾಗಿ ಬಿಯರ್ ವಿಸ್ಕಿ ರಮ್ ಮತ್ತು ವೋಡ್ಕಾ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್ ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.
ಏನಿದು ಹೊಸ ನೀತಿ ಮತ್ತು ಬೆಲೆ ಇಳಿಕೆಗೆ ಕಾರಣವೇನು
ರಾಜ್ಯ ಸರ್ಕಾರವು ಈ ಬಾರಿ ಆಲ್ಕೋಹಾಲ್ ಇನ್ ಬೆವರೇಜ್ ಅಥವಾ ಎಐಬಿ ಎಂಬ ನೂತನ ಸುಂಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಮದ್ಯದ ಬ್ರ್ಯಾಂಡ್ ಆಧರಿಸಿ ದರ ನಿಗದಿ ಮಾಡಲಾಗುತ್ತಿತ್ತು. ಆದರೆ ಈಗ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ಅಬಕಾರಿ ಸುಂಕವನ್ನು ನಿಗದಿಪಡಿಸಲಾಗಿದೆ. ಇಂತಹ ಕ್ರಾಂತಿಕಾರಿ ಮತ್ತು ವೈಜ್ಞಾನಿಕ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ವಿಶ್ವದ ಹಲವು ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಈ ಪದ್ಧತಿ ಅಸ್ತಿತ್ವದಲ್ಲಿದೆ.
ಪಾರದರ್ಶಕತೆ ಮತ್ತು ಆದಾಯದ ನಿರೀಕ್ಷೆ
ಹೊಸ ನಿಯಮದಿಂದ ಮದ್ಯದ ದರ ನಿಗದಿಯಲ್ಲಿ ಪಾರದರ್ಶಕತೆ ಬರಲಿದೆ. ಇದರಿಂದ ಸಾಮಾನ್ಯ ಜನರಿಗೆ ದರದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಇನ್ನೊಂದು ಕಡೆ ಬೆಲೆ ಇಳಿಕೆಯಿಂದಾಗಿ ಮದ್ಯದ ಮಾರಾಟ ಹೆಚ್ಚಳವಾಗಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದುಬರಲಿದೆ ಎಂದು ಅಬಕಾರಿ ಇಲಾಖೆ ಅಂದಾಜಿಸಿದೆ.
ಪ್ರಮುಖ ಮದ್ಯದ ಬ್ರ್ಯಾಂಡ್ ಗಳ ಹೊಸ ದರ ಪಟ್ಟಿ ಈ ಕೆಳಗಿನಂತಿದೆ
ರಮ್ ಮತ್ತು ಬ್ರ್ಯಾಂಡಿ ವಿಭಾಗ
ಲೆಗಸಿ ಸ್ಪೆಷಲ್ ಎಕ್ಸ್ ಎಕ್ಸ್ ಎಕ್ಸ್ ರಮ್ 90 ಎಂ ಎಲ್ ಗೆ 45 ರೂಪಾಯಿ ಕ್ವಾಟರ್ ಗೆ 90 ರೂಪಾಯಿ ಮತ್ತು ಫುಲ್ ಬಾಟಲ್ ಗೆ 370 ರೂಪಾಯಿ ನಿಗದಿಯಾಗಿದೆ.
ಗ್ರೀನ್ ಚಾಂಪಿಯನ್ ಬ್ರ್ಯಾಂಡಿ 90 ಎಂ ಎಲ್ ಗೆ 55 ರೂಪಾಯಿ ಕ್ವಾಟರ್ ಗೆ 105 ರೂಪಾಯಿ ಮತ್ತು ಫುಲ್ ಬಾಟಲ್ ಗೆ 420 ರೂಪಾಯಿ ಆಗಿದೆ.
ಅಮೃತಾ ಸಿಲ್ವರ್ ಕಪ್ ಬ್ರ್ಯಾಂಡಿ 90 ಎಂ ಎಲ್ ಗೆ 55 ರೂಪಾಯಿ ಹಾಗೂ ಕ್ವಾಟರ್ ಗೆ 95 ರೂಪಾಯಿ ಬೆಲೆ ನಿಗದಿಯಾಗಿದೆ.
ವಿಸ್ಕಿ ವಿಭಾಗದ ವಿವರಗಳು
ರಾಯಲ್ ಗೋಲ್ಡ್ ಕಪ್ ವಿಸ್ಕಿ 90 ಎಂ ಎಲ್ ಗೆ 55 ರೂಪಾಯಿ ಕ್ವಾಟರ್ ಗೆ 105 ರೂಪಾಯಿ ಮತ್ತು ಫುಲ್ ಬಾಟಲ್ ಗೆ 420 ರೂಪಾಯಿ ಆಗಿದೆ.
ರಾಜಾ ವಿಸ್ಕಿ 90 ಎಂ ಎಲ್ ಗೆ 55 ರೂಪಾಯಿ ಕ್ವಾಟರ್ ಗೆ 110 ರೂಪಾಯಿ ಮತ್ತು ಫುಲ್ ಬಾಟಲ್ ಗೆ 445 ರೂಪಾಯಿ ಆಗಿದೆ.
ಹೇವರ್ಡ್ಸ್ ವಿಸ್ಕಿ 90 ಎಂ ಎಲ್ ಗೆ 55 ರೂಪಾಯಿ ಕ್ವಾಟರ್ ಗೆ 110 ರೂಪಾಯಿ ಮತ್ತು ಫುಲ್ ಬಾಟಲ್ ಗೆ 455 ರೂಪಾಯಿ ನಿಗದಿಯಾಗಿದೆ.
ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ ಎಲ್ ಗೆ 55 ರೂಪಾಯಿ ಕ್ವಾಟರ್ ಗೆ 110 ರೂಪಾಯಿ ಮತ್ತು ಫುಲ್ ಬಾಟಲ್ ಗೆ 485 ರೂಪಾಯಿ ಆಗಿದೆ.
ಬ್ಯಾಗ್‌ಪೈಪರ್ ವಿಸ್ಕಿ 90 ಎಂ ಎಲ್ ಗೆ 70 ರೂಪಾಯಿ ಕ್ವಾಟರ್ ಗೆ 135 ರೂಪಾಯಿ ಮತ್ತು ಫುಲ್ ಬಾಟಲ್ ಗೆ 560 ರೂಪಾಯಿ ಆಗಿದೆ.
8ಪಿಎಂ ಬ್ಲೂ ವಿಸ್ಕಿ 90 ಎಂ ಎಲ್ ಗೆ 75 ರೂಪಾಯಿ ಕ್ವಾಟರ್ ಗೆ 145 ರೂಪಾಯಿ ಮತ್ತು ಫುಲ್ ಬಾಟಲ್ ಗೆ 595 ರೂಪಾಯಿ ಆಗಿದೆ.
ರಾಯಲ್ ಸ್ಟ್ಯಾಗ್ ವಿಸ್ಕಿ 90 ಎಂ ಎಲ್ ಗೆ 150 ರೂಪಾಯಿ ಕ್ವಾಟರ್ ಗೆ 280 ರೂಪಾಯಿ ಮತ್ತು ಫುಲ್ ಬಾಟಲ್ ಗೆ 1145 ರೂಪಾಯಿ ನಿಗದಿಯಾಗಿದೆ.
ಪ್ರೀಮಿಯಂ ಮದ್ಯ ಮತ್ತು ವೋಡ್ಕಾ ಬೆಲೆಗಳು
ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕ್ವಾಟರ್ ಬಾಟಲ್ ಗೆ 310 ರೂಪಾಯಿ ಮತ್ತು ಫುಲ್ ಬಾಟಲ್ ಗೆ 1260 ರೂಪಾಯಿ ನಿಗದಿಯಾಗಿದೆ.
ಸ್ಮಿರ್ನ್‌ಆಫ್ ಟ್ರಿಪಲ್ ವೋಡ್ಕಾ ಕ್ವಾಟರ್ ಗೆ 346 ರೂಪಾಯಿ ಮತ್ತು ಫುಲ್ ಬಾಟಲ್ ಗೆ 1365 ರೂಪಾಯಿ ಆಗಿದೆ.
ಪೀಟರ್ ಸ್ಕಾಟ್ ಮಾಲ್ಟ್ ವಿಸ್ಕಿ ಕ್ವಾಟರ್ ಗೆ 350 ರೂಪಾಯಿ ಮತ್ತು ಫುಲ್ ಬಾಟಲ್ ಗೆ 1325 ರೂಪಾಯಿ ಆಗಿದೆ.
ಬ್ಲ್ಯಾಕ್ ಅಂಡ್ ವೈಟ್ ಬ್ಲೆಂಡೆಡ್ ವಿಸ್ಕಿ ಕ್ವಾಟರ್ ಗೆ 580 ರೂಪಾಯಿ ಮತ್ತು ಫುಲ್ ಬಾಟಲ್ ಗೆ 2375 ರೂಪಾಯಿ ಬೆಲೆ ಹೊಂದಿದೆ.
ಜಾನಿ ವಾಕರ್ ವಿಸ್ಕಿ ಕ್ವಾಟರ್ ಗೆ 810 ರೂಪಾಯಿ ಮತ್ತು ಫುಲ್ ಬಾಟಲ್ ಗೆ 2810 ರೂಪಾಯಿ ನಿಗದಿಯಾಗಿದೆ.
ಈ ಹೊಸ ದರ ಪಟ್ಟಿಯು ಮದ್ಯ ಪ್ರಿಯರಲ್ಲಿ ಹರ್ಷ ತಂದಿದ್ದು ರಾಜ್ಯಾದ್ಯಂತ ಶೀಘ್ರದಲ್ಲೇ ಜಾರಿಗೆ ಬರಲಿದೆ. ಮದ್ಯದ ಬೆಲೆ ಇಳಿಕೆಯಿಂದಾಗಿ ನೆರೆ ರಾಜ್ಯಗಳಿಗೆ ಮದ್ಯ ಸಾಗಾಣಿಕೆಯಾಗುವುದು ಕಡಿಮೆಯಾಗಲಿದೆ ಎಂದು ಸರ್ಕಾರ ಭಾವಿಸಿದೆ.







