ಬಜೆಟ್ ನಲ್ಲಿ ಹಿಂದುಳಿದ ಜಾತಿಗಳಿಗೆ ದ್ರೋಹ : ಸಿದ್ದರಾಮಯ್ಯ
ಬೆಂಗಳೂರು : ಬಜೆಟ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಿಂದುಳಿದ ಜಾತಿಗಳಿಗೆ ದ್ರೋಹ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಬಲ ಜಾತಿಗಳನ್ನು 2ಂ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಯಿತು.
ಈ ಧರಣಿ ಸತ್ಯಾಗ್ರಹದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್ ಎಂ ರೇವಣ್ಣ,ಮಾಜಿ ಶಾಸಕ ಲಕ್ಷ್ಮಿ ನಾರಾಯಣ, ಮುಖ್ಯ ಮಂತ್ರಿ ಚಂದ್ರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಲಿಷ್ಟ ಪಂಗಡಿಗಳೆಲ್ಲಾ 2ಎ ಮೀಸಲಾತಿಗೆ ಆಗ್ರಹಿಸುತ್ತಿವೆ. ಹಿಂದುಳಿದ ವರ್ಗಗಳ ವಿರೋಧಿ ನೀತಿ ವಿರುದ್ಧ ಹೋರಾಟ ನಡೀತಿದೆ. ನಿಮ್ಮ ಬೆಂಬಲವಾಗಿ ನಾನು ಇರ್ತೇನೆ.
ನಾನು ಸಿಎಂ ಆಗಿದ್ದಾಗ ಪ್ರತೀ ಬಜೆಟ್ ಮಂಡಿಸುವಾಗ ಪೂರ್ವಭಾವಿಯಾಗಿ ಮೀಟಿಂಗ್ ಕರೆಯುತ್ತಿದ್ದೆ. ಪ್ರತಿಯೊಂದು ವಲಯದಲ್ಲಿವರುವರನ್ನು ಕರೆದು ಮೀಟಿಂಗ್ ಮಾಡ್ತಿದ್ದೆ.
ಎಲ್ಲರೂ ಏನ್ ಹೇಳ್ತಾರೆ ಅದನ್ನ ಪರಿಗಣಿಸಿ ಬಜೆಟ್ ಮಂಡನೆ ಮಾಡ್ತಿದ್ದೆ. ಆದ್ರೆ ಯಡಿಯೂರಪ್ಪ ಆ ರೀತಿ ಮಾಡಿಲ್ಲ. ರಾಜ್ಯದಲ್ಲಿ 18 ಅಭಿವೃದ್ಧಿ ನಿಗಮಗಳು ಇವೆ, ಅವನ್ನೆಲ್ಲಾ ನಾನೆ ಮಾಡಿದ್ದೇನೆ.
ಯಡಿಯೂರಪ್ಪ ಸರ್ಕಾರ ಎರಡು ಅಭಿವೃದ್ಧಿ ನಿಗಮಗಳನ್ನ ಮಾಡಿದೆ. ಅದಕ್ಕೆ ನನ್ನ ಬೆಂಬಲವಿಲ್ಲ.
ಆದ್ರೆ ಅವರಿಗೆ 500 ಕೋಟಿ ಬಿಡುಗಡೆ ಮಾಡಿದೆ ಇದು ಅವರಿಗೆ ಅವಶ್ಯಕತೆ ಇತ್ತಾ..? ಇದು ಹಿಂದುಳಿದ ಜಾತಿಗಳಿಗೆ ಮಾಡಿದ ದ್ರೋಹ ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.










