ಬಜೆಟ್ ಭಾಷಣ ಮುಕ್ತಾಯ, ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ Saaksha Tv
ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ಮುಕ್ತಾಯಗೊಂಡಿದೆ. ನಿರ್ಮಲಾ ಸೀತಾರಾಮನ್ ಅವರು , ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ವಿತ್ತ ಸಚಿವರು ಹಣಕಾಸು ವಿಧೇಯಕ ಮಂಡಿಸಿದರು.
ಬಜೆಟ್ ಭಾಷಣ ಮುಕ್ತಾಯವಾಗಿದ್ದು ನಿರ್ಮಲಾ ಸೀತಾರಾಮನ್ನ ಈ ಹಿಂದಿನ ಬಜೆಟ್ ಭಾಷಣಗಳಿಗೆ ಹೋಲಿಸಿದರು ಇದು ಕಡಿಮೆ ಅವಧಿಯದ್ದು. ಈ ಬಾರಿ ವಿತ್ತ ಸಚಿವರು 90 ನಿಮಿಷಗಳಲ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದರು. ತೆರಿಗೆ ವಿಚಾರ ಮಾತನಾಡುವಾಗ ಮಹಾಭಾರತದ ಉಲ್ಲೇಖ ಹೊರತುಪಡಿಸಿದರೆ ಉಳಿದಂತೆ ಯಾವುದೇ ಕಾವ್ಯವನ್ನು ಈ ಬಾರಿಯ ಭಾಷಣದಲ್ಲಿ ವಿತ್ತ ಸಚಿವರು ಉಲ್ಲೇಖಿಸಲಿಲ್ಲ.
ನಿರ್ಮಲಾ ಸೀತಾರಾಮನ್ ಅವರು 1 ಗಂಟೆ 33 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಲೋಕಸಭೆ ಕಲಾಪವನ್ನು ನಾಳೆ ಸಂಜೆ 4.30ಕ್ಕೆ ಮುಂದೂಡಲಾಯಿತು.









