ಭೀಮ್ಲಾ, ಗಂಗೂಬಾಯಿ, ವಲಿಮೈ – ಮೊದಲ ದಿನ ಮಾಡಿದ ಕಮಾಯಿ ಎಷ್ಟು ???
ಒಂದು ದಿನದ ಹಿಂದೆ ಮುಂದೆ ಕಾಲಿವುಡ್ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಘಟಾನುಘಟಿ ಚಿತ್ರಗಳು ಬಿಡುಗಡೆಯಾಗಿವೆ. ಮೊದಲ ದಿನವೇ ಬಾಕ್ಸ್ ಆಫಿಸ್ ನಲ್ಲಿ ದೂಳೆಬ್ಬಿಸಿ ಹೊಸ ದಾಖಲೆಯನ್ನ ಸೃಷ್ಟಿಸಿವೆ.. ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ , ಅಜಿತ್ ಅಭಿನಯದ ವಲಿಮೈ, ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರಗಳು ಬಿಡುಗಡೆಯಾಗಿದ್ದು ಮೊದಲ ದಿನ ಗಳಿಸಿದ ಹಣವೆಷ್ಟು ಎನ್ನುವ ಮಾಹಿತಿ ನಾವು ಕೊಡ್ತೀವಿ ನೋಡಿ..
ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಸರಾಸರಿ 10.50 ಕೋಟಿ ರೂ. ಗಳಿಸಿದೆ. ಕೆಲವೊಂದು ಕಡೆ ಚಿತ್ರಮಂದಿರಗಳಲ್ಲಿ 50% ಅಕ್ಯೂಪೆನ್ಸಿ ಇರುವುದರಿಂದ ಕಲೆಕ್ಷನ್ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ವಿಮರ್ಶಕರು ಮತ್ತು ಬಾಕ್ಸ್ ಆಫಿಸ್ ಪಂಡಿತರದ್ದು.
ಸೌತ್ ಸೂಪರ್‌ಸ್ಟಾರ್ ಅಜಿತ್ ಅವರ ವಾಲಿಮೈ ಈ ವರ್ಷದ ಬಂಪರ್ ಓಪನಿಂಗ್‌ನೊಂದಿಗೆ ಒಂದು ದಿನದ ಮೊದಲು ರಿಲೀಸ್ ಆಗಿದೆ. ವಲಿಮೈ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ತಮಿಳುನಾಡಿನಲ್ಲಿ ಇದರ ಮೊದಲ ದಿನದ ಕಲೆಕ್ಷನ್ 36 ಕೋಟಿ. ಚೆನ್ನೈ 1.84 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚೆನ್ನೈನಲ್ಲಿ ಇಷ್ಟು ದೊಡ್ಡ ಓಪನಿಂಗ್ ಪಡೆದ ಅಜಿತ್ ಅವರ ಮೊದಲ ಚಿತ್ರ ಇದಾಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಚಿತ್ರ ಆಂಧ್ರ ತೆಲಂಗಾಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಎಲ್ಲಾಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪವರ್ ಸ್ಟಾರ್ ಮತ್ತೊಮ್ಮೆ ಪೊಲೀಸ್ ಡ್ರೆಸ್ ನಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬರೊಬ್ಬರಿ 61.24 ಕೋಟಿ ರೂ.
ಕೋವಿಡ್ ಅವಧಿಯಲ್ಲಿ ಬಿಡುಗಡೆಯಾಗಿರುವ ಸೌತ್ ಚಿತ್ರಗಳ ಆರಂಭಿಕ ಕಲೆಕ್ಷನ್‌ಗಳು ಉತ್ತಮವಾಗಿವೆ. ಕಳೆದ ವರ್ಷ ಜನವರಿ 13 ರಂದು ತೆರೆಕಂಡ ‘ಮಾಸ್ಟರ್’ ಸಿನಿಮಾ ಮೊದಲ ದಿನವೇ 42 ಕೋಟಿ ಗಳಿಸಿತ್ತು. ನವೆಂಬರ್ 4 ರಂದು ಬಿಡುಗಡೆಯಾದ ರಜನಿಕಾಂತ್ ಅವರ ‘ಅನ್ನತೆ’ ಚಿತ್ರವು ತಮಿಳುನಾಡಿನಲ್ಲಿಯೇ 34.92 ಕೋಟಿ ರೂ. ಗಳಿಸಿತ್ತು. ಮೋಹನ್ ಲಾಲ್ ಅಭಿನಯದ ‘ಮರಕ್ಕರ್: ಅರಬ್ಬೀ ಸಮುದ್ರದ ಸಿಂಹ’ ಮೊದಲ ದಿನವೇ 6 ಕೋಟಿ ಗಳಿಸಿದೆ. ಮತ್ತೊಂದೆಡೆ, ಅಲ್ಲು ಅರ್ಜುನ್ ಅವರ ‘ಪುಷ್ಪ: ದಿ ರೈಸ್ ಸ್ಟಾರ್’ 52.50 ಕೋಟಿ ರೂ.ಗಳ ಓಪನಿಂಗ್ ಮೂಲಕ ವರ್ಷದ ಅತಿದೊಡ್ಡ ಚಿತ್ರವಾಯಿತು. ಆದರೆ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ 26 ಕೋಟಿ ಓಪನಿಂಗ್ ಗಳಿಸಿತ್ತು.