‘ಇನ್ಮುಂದೆ ಬಹಿರಂಗವಾಗಿ ಬುರ್ಖಾ, ಮುಸುಕು ಧರಿಸುವಂತಿಲ್ಲಾ’…!
ಶ್ರೀಲಂಕಾ : ಇನ್ಮುಂದೆ ಶ್ರೀಲಂಕಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಅಥವ ಮುಸುಕು ಧಾರಣೆ ಮಾಡುವುದು ಕಾನೂನು ಬಾಹಿರ ಎಂದು ಅಲ್ಲಿನ ಸರ್ಕಾರ ಆದೇಶ ಹೊರಡಿಸಿ ಕಾನೂನು ಜಾರಿ ಮಾಡಿದೆ. ಬುರ್ಖಾ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದ ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂಬ ಕಾರಣ ನೀಡಿರುವ ಶ್ರೀಲಂಕಾದ ಸಚಿವ ಸಂಪುಟವು ಈ ಕಾನೂನಿಗೆ ಅನುಮೋದನೆ ನೀಡಿದೆ. ಇದು ವಿವಾದವನ್ನೂ ಹುಟ್ಟುಹಾಕಿತ್ತು. ಈ ಕಾಯ್ದೆ ವಿರೋಧಗಳು ವ್ಯಕ್ತವಾದ ನಂತರವೂ ಕಾನೂನು ಜಾರಿಗೆ ತಂದಿದೆ. ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಅವರು ಕಳೆದ ಮಾರ್ಚ್‌ನಲ್ಲಿ ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದರು. ಬುರ್ಖಾಗಳನ್ನು ನಿಷೇಧಿಸಲು ಸಂಪುಟದ ಅನುಮೋದನೆಯನ್ನು ಅವರು ಕೋರಿದ್ದರು. ನಂತರ ಇದರ ಬಗ್ಗೆ ವಿವಾದದ ಅಲೆ ಎದ್ದಿತ್ತು. ಅದರ ನಡುವೆಯೂ ಇದೀಗ ಶ್ರೀಲಂಕಾ ಸಚಿವ ಸಂಪುಟ ಬುರ್ಖಾ ನಿಷೇಧಕ್ಕೆ ಅನುಮೋದನೆ ನೀಡಿದೆ.







