ಕಠ್ಮಂಡು: ಭಾರತೀಯರಿದ್ದ ಬಸ್ ಪಲ್ಟಿಯಾದ ಪರಿಣಾಮ 14 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
40 ಜನ ಭಾರತೀಯರಿದ್ದ ಬಸ್ ನದಿಗೆ ಪಲ್ಟಿಯಾದ ಪರಿಣಾಮ ಈ ಘಟನೆ ನಡೆದಿದೆ. ನೇಪಾಳದಲ್ಲಿ (Nepal) ಈ ಘಟನೆ ನಡೆದಿದೆ. ನೇಪಾಳದ ತನಾಹುನ್ ಜಿಲ್ಲೆಯ (Tanahun District) ಮರ್ಸ್ಯಾಂಗ್ಡಿ ನದಿಗೆ (Marsyangdi River) ಬಸ್ ಉರುಳಿ ಬಿದ್ದಿದೆ. ಉತ್ತರ ಪ್ರದೇಶದ (Uttar Pradesh) ಎಫ್ ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಬಿದ್ದಿದೆ.
ತನಾಹುನ್ ಜಿಲ್ಲೆಯ ಡಿಎಸ್‌ಪಿ ದೀಪ್‌ಕುಮಾರ್ ರಾಯಾ (DSP Deepkumar Roy) ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 40 ಜನ ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ (Pokhara) ಕಠ್ಮಂಡುವಿನಿಂದ (Kathmandu) ಹೋಗುತ್ತಿತ್ತು. ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಉರುಳಿದೆ. 14 ಜನರು ಸಾವನ್ನಪ್ಪಿದ್ದು ಮತ್ತು 16 ಜನ ಗಾಯಗೊಂಡಿದ್ದಾರೆ ಎಂದು ನೇಪಾಳ ಪೊಲೀಸರು ಹೇಳಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಸ್ತೆಯಿಂದ ಸುಮಾರು 300 ಮೀಟರ್ ಉರುಳಿ ನದಿಗೆ ಬಿದ್ದಿದೆ.








