ಬ್ಯಾಂಕಾಕ್: ಭೀಕರ ಬೆಂಕಿ ಅವಘಡವೊಂದು ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದ್ದು, 25 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಸಜೀವವಾಗಿ ದಹನಗೊಂಡಿದ್ದಾರೆ ಎನ್ನಲಾಗಿದೆ.
ಶಾಲಾ ಬಸ್ಸೊಂದರಲ್ಲಿ ಅಗ್ನಿ ಆಕಸ್ಮಿಕ (School Bus fire) ಸಂಭವಿಸಿದ ಪರಿಣಾಮಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವವಾಗಿ ದಹನವಾಗಿದ್ದಾರೆ. 16 ಮಕ್ಕಳು, ಮೂವರು ಶಿಕ್ಷಕರನ್ನು (Teachers) ರಕ್ಷಿಸಲಾಗಿದೆ.
ಪ್ರವಾಸಕ್ಕೆ ತರಳಿದ್ದ ಶಾಲಾ ಬಸ್ ಥೈಲ್ಯಾಂಡ್‌ಗೆ (Thailand) ಮರಳುತ್ತಿದ್ದಾಗ ಟೈರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೂ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬ್ಯಾಂಕಾಕ್ ನ ಉತ್ತರಕ್ಕೆ 100 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಥಾಯ್ಲೆಂಡ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಬಾನೆತ್ತರಕ್ಕೆ ಬಿಂಕಿಯ ಕಿಡಿ ಹಾಗೂ ದಟ್ಟ ಹೊಗೆ ಆವರಿಸಿದೆ. ಈ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಘಟನೆಯಲ್ಲಿ ಬದುಕುಳಿದ 16 ಮಕ್ಕಳು, ಮೂವರು ಶಿಕ್ಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.