ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೊರೊನಾ ಎಂಬ ಮಹಾಮಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಇಂದು ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ರಾಜ್ಯಾದ್ಯಂತ ೩೦೦ ಬಸ್ ಗಳ ಸಂಚಾರವನ್ನು ನಿಲ್ಲಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಕೆ.ಎಸ್.ಆರ್.ಟಿ.ಸಿ ನಿಗಮದ ಪ್ರತಿಷ್ಠಿತ ಬಸ್ ಗಳಲ್ಲಿ ನೀಡುತ್ತಿದ್ದ, ಹೊದಿಕೆಗಳನ್ನು ತಾತ್ಕಾಲಿಕವಾಗಿ ನೀಡಬಾರದು ಎಂಬ ಆದೇಶ ಹೊರಡಿಸಿದೆ. ಕೆ.ಎಸ್.ಆರ್.ಟಿ.ಸಿ ನಿಗಮದ ಪ್ರತಿಷ್ಠಿತ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬ್ಲಾಕೆಂಟ್‌ಗಳನ್ನು ನೀಡಲಾಗುತ್ತಿತ್ತು. ಕೊರೊನಾ ವೈರಸ್ ಹರುಡುವಿಕೆ ಹೆಚ್ಚಾಗಿರುವ ಕಾರಣಕ್ಕಾಗಿ ಕೆ.ಎಸ್.ಆರ್.ಟಿ.ಸಿ ನೀಡುತ್ತಿದ್ದ ಬ್ಲಾಕೆಂಟ್ ಮತ್ತು ಬೆಡ್ ಮೇಲೆ ಹಾಸುವ ಬೆಡ್ ಶೀಟುಗಳನ್ನು ನೀಡುವುದನ್ನು ಸ್ಟಾಪ್ ಮಾಡಲಾಗಿದೆ. ಅಲ್ಲದೆ ಪ್ರಯಾಣಿಕರೇ ಬ್ಲಾಕೆಂಟ್ ಮತ್ತು ಬೆಡ್ ಮೇಲೆ ಹಾಸುವ ಬೆಡ್ ಶೀಟುಗಳನ್ನು ತರಬೇಕು ಎಂದು ಕೆ.ಎಸ್.ಆರ್.ಟಿ.ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








