ಧಾರವಾಡ : ಇಂದಿನಿಂದ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಚಿಗರಿ ಬಸ್ ಸಂಚಾರ ಪ್ರಾರಂಭವಾಗಿದೆ. ಹವಾನಿಯಂತ್ರಿತ ಚಿಗರಿ ಬಸ್ ಸಂಚಾರ ಲಾಕ್ ಡೌನ್ ಕಾರಣಕ್ಕೆ ಬಂದ್ ಆಗಿತ್ತು. ಲಾಕ್ ಡೌನ್ ಸಡಿಲಗೊಂಡು ಬಸ್ ಸಂಚಾರ ಆರಂಭವಾಗಿದ್ದರೂ, ಇದುವರೆಗೆ ಬಿ.ಆರ್.ಟಿ.ಎಸ್ ಬಸ್ ರಸ್ತೆಗಿಳಿದಿರಲಿಲ್ಲ. ಸರ್ಕಾರದ ನಿರ್ದೇಶನದಂತೆ ಹವಾನಿಯಂತ್ರಿತ ಚಿಗರಿ ಬಸ್ ಸಂಚಾರ ಆರಂಭ ಮಾಡಿದೆ.
ಅಲ್ಲದೆ ಸಂಚಾರದ ಅವಧಿಯಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿ ಅಳವಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿಯಲಿರುವ ಬಸ್ ಗಳು, ಪ್ರಯಾಣಿಕರ ಆದ್ಯತೆ ಮೆರೆಗೆ ಹೆಚ್ಚಾಗಲಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಹುಬ್ಬಳಿ ಧಾರವಾಡ ಜನರ ಪ್ರಯಾಣಕ್ಕೆ ಅನುಕೂಲವಾಗಿದೆ.
ಆದರೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣಕ್ಕೆ ಜನರ ಬಸ್ ಸಂಚಾರವನ್ನು ಕಡಿಮೆ ಮಾಡಿದ್ದಾರೆ. ಸಾಧ್ಯವಾದಷ್ಟು ತಮ್ಮ ಸ್ವತಃ ವಾಹನಗಳನ್ನು ಬಳಸ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಚಿಗರಿ ಬಸ್ ಸಂಚಾರ ಆರಂಭವಾಗಿದೆ. ಅಲ್ಲದೆ ಬಸ್ ಸಂಚಾರ ಬಂದ್ ಆಗಿರುವ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಆದ್ದರಿಂದ ಸಾರಿಗೆ ಇಲಾಖೆ ಬಸ್ ಸಂಚಾರ ಆರಂಭಿಸಿದೆ. ಅಲ್ಲದೆ ಸಂಚಾರದ ವೇಳೆಯಲ್ಲಿ ಕೋವಿಡ್ 19 ನಿಯಂತ್ರಣದ ನಿಯಮಗಳನ್ನು ಪಾಲಿಸಲು ಇಲಾಖೆ ಮುಂದಾಗಿದೆ.








