ಪುತ್ತೂರಿನಿಂದ ಪಾಣತ್ತೂರು ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಬಸ್ ಪಲ್ಟಿ – 7 ಮಂದಿ ಸ್ಥಳದಲ್ಲಿಯೇ ಸಾವು
ಪುತ್ತೂರು, ಜನವರಿ03: ಪುತ್ತೂರಿನಿಂದ ಪಾಣತ್ತೂರು ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಪಾನತ್ತೂರು ಬಳಿ ಪಲ್ಟಿಯಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೊಡಗಿನ ಕರಿಕೆಗೆ ಪುತ್ತೂರಿನಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಮಾರ್ಗವಾಗಿ ಮದುವೆ ದಿಬ್ಬಣದ ಬಸ್ಸು ಸಾಗುತ್ತಿತ್ತು. ಸ್ಥಳದಲ್ಲಿಯೇ 7 ಮಂದಿ ಸಾವನ್ನಪ್ಪಿದ್ದು , ಹಲವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಕೇರಳದ ಪಾನತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿ ಬಸ್ ಮನೆಯೊಂದರ ಮೇಲೆ ಪಲ್ಟಿಯಾಗಿ ಬಿದ್ದಿದ್ದು, ಒಂದು ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ ಮೃತರ ವಿವರ ಇನ್ನೂ ಲಭ್ಯವಾಗಿಲ್ಲ.
60 ಜನರಿದ್ದ ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಈ ದುರಂತದಲ್ಲಿ ಗಾಯಗೊಂಡವರನ್ನು ಕೇರಳದ ಕಾಂಞಂಗಾಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತಂತೆ ಮತ್ತಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳುhttps://t.co/HhYDoJETEb
— Saaksha TV (@SaakshaTv) December 31, 2020
ಜನವರಿ 1ರಿಂದ ಬದಲಾದ ರೈಲು ಟಿಕೆಟ್ ಕಾಯ್ದಿರಿಸುವ ವಿಧಾನ https://t.co/VytpPCKmxG
— Saaksha TV (@SaakshaTv) January 2, 2021