ಕೊಡಗು – ಕೇರಳ ನಡುವಿನ ಬಸ್ ಸಂಚಾರ ರದ್ದು Kodagu saaksha tv
ಕೊಡಗು : ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರವಾಗಿ ಕೊಡಗು ಹಾಗೂ ಕೇರಳ ನಡುವಿನ ಬಸ್ ಸಂಚಾರ ರದ್ದು ಮಾಡಲಾಗಿದೆ.
ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೆಮ್ಮಾರಿಯ ಆರ್ಭಟ ಮಿತಿ ಮೀರಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ.
ಅದರಂತೆ ಕೊಡಗು ಹಾಗೂ ಕೇರಳ ನಡುವಿನ ಬಸ್ ಸಂಚಾರ ರದ್ದುಪಡಿಸಲಾಗಿದೆ.
ಇನ್ನು ಈಗಾಗಲೇ ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವೀಕೆಂಡ್ ಕಫ್ರ್ಯೂ ಕೂಡ ಜಾರಿಯಲ್ಲಿದೆ.
ಈ ನಡುವೆ ಕೊಡಗು ಜಿಲ್ಲಾಡಳಿತ ಕೊಡಗು ಹಾಗೂ ಕೇರಳ ನಡುವಿನ ಬಸ್ ಸಂಚಾರವನ್ನು ತಾತ್ಕಾಲಿಕ ಬಂದ್ ಮಾಡಿದೆ.









