ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರದಿಂದ ಬಸ್ ಸಂಚಾರ ಆರಂಭಗೊಂಡಿದೆ. ಜಿಲ್ಲೆಯ ಎಲ್ಲ ಡಿಪೋ ಗಳಿಂದ ಬಸ್ ಸಂಚಾರ ಆರಂಭವಾಗಿವೆ. ಆದಾಗ್ಯೂ ನಿಪ್ಪಾಣಿ ತಾಲೂಕಿನಲ್ಲಿ ಬಸ್ ಸಂಚಾರ ಇಲ್ಲ. ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರೇ ಬರುತ್ತಿಲ್ಲ.
ನಿಪ್ಪಾಣಿ ತಾಲೂಕಿನ ಪ್ರಮುಖ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಈವರೆಗೆ ಸುಮಾರು 20ಕ್ಕೂ ಹೆಚ್ಚು ಬಸ್ಗಳು ಸಂಚಾರ ಆರಂಭಿಸಿವೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಆಗಮಿಸಿದ್ದಾರೆ. 30 ಬೇಡ, 15 ಪ್ರಯಾಣಿಕರಾದರೂ ಬಂದರೂ ಬಸ್ ಬಿಡುತ್ತೇವೆ ಅಂದ್ರೂ ಪ್ರಯಾಣಿಕರು ಬರುತ್ತಿಲ್ಲ. ಸಾರಿಗೆ ಇಲಾಖೆಗೆ ಪ್ರಯಾಣಿಕರ ಸಮಸ್ಯೆ ತಲೆನೋವು ತಂದಿದೆ.