ಬೆಂಗಳೂರು : ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ. ಸಿಎಂ ಪರಿಹಾರ ನಿಧಿಗೆ ಉದ್ಯಮಿಗಳು, ಟ್ರಸ್ಟ್ ಗಳು ಸೇರಿದಂತೆ ಎಲ್ಲ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಖಾಸಗಿ ಯುವ ಉದ್ಯಮಿಗಳು ಹೊರತಾಗಿಲ್ಲ.
ಇದೀಗ ಮಾಜಿ ಸಂಸದ ಹಾಗೂ ಕೆಪಿಸಿಸಿ ಹಿರಿಯ ಮುಂಖಡರಾದ ಕಾಗಲವಾಡಿ ಶಿವಣ್ಣ ರವರ ಪುತ್ರಿ ಖಾಸಗಿ ಉದ್ಯಮಿ ಅಪೂರ್ವ ಅವರು ಸಹ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಇಂದು ಮುಖ್ಯಮಂತ್ರಿಗಳನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಉದ್ಯಮಿ ಅಪೂರ್ವ ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ದೇಣಿಗೆ ನೀಡಿದ್ದಾರೆ.
ವಿಶ್ವದೆಲ್ಲೆಡೆ ಕೊರೊನಾ ವೈರಸ್ ಕರಾಳ ನರ್ತನ ಮಾಡುತ್ತಿದೆ. ಇದಕ್ಕೆ ಭಾರತದಲ್ಲೂ ಜನರು ಬಲಿಯಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್ ನಿಂದ ಸೋಂಕು ಹರಡಬಾರದು ಹಾಗೂ ರಾಜ್ಯದ ಜನತೆಯಲ್ಲಿ ಜಾಗೃತಿ ಮಾಡಿಸಬೇಕು ಎಂದು ಉದ್ಯಮಿ ಅಪೂರ್ವರವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.








